Ad imageAd image
- Advertisement -  - Advertisement -  - Advertisement - 

ಬೆಳಗಾವಿ : ನಿರಂತರ ಮಳೆ, ಕಾಲು ಜಾರಿ ಬಿದ್ದು ವೃದ್ಧೆ ಸಾವು 

Bharath Vaibhav
ಬೆಳಗಾವಿ : ನಿರಂತರ ಮಳೆ, ಕಾಲು ಜಾರಿ ಬಿದ್ದು ವೃದ್ಧೆ ಸಾವು 
WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆ ನೀರು ಮನೆಗೆ ನುಗ್ಗಿದ ಪರಿಣಾಮ ಅನಾಹುತವೊಂದು ಸಂಭವಿಸಿದೆ. ಕಾಲು ಜಾರಿ ಬಿದ್ದ ವೃದ್ಧೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಳಗಾವಿಯ ಅಮನ್ ನಗರದಲ್ಲಿ ಈ ದುರಂತ ಸಂಭವಿಸಿದೆ. ಭಾರಿ ಮಳೆಯಿಂದಾಗಿ ಕಾಲೋನಿಯ ಡ್ರೈನೇಜ್ ನೀರು ಮನೆಗಳಿಗೆ ನುಗ್ಗಿದೆ. ಅಮನ್ ನಗರದಲ್ಲಿ ಅವಾಂತರವೇ ಸೃಷ್ಟಿಯಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ಡ್ರೈನೇಜ್ ವಾಟರ್ ಮನೆಗೆ ನುಗ್ಗಿ, ಮನೆಯಲ್ಲಿದ್ದ ಮಹಿಳೆ ಕಾಲು ಜಾರಿ ಬಿದ್ದು, ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ಮೆಹಬೂಬಿ ಅದಂಸಾಹೇಬ್ ಮಕಂದಾರ್ ಎಂದು ಗುರುತಿಸಲಾಗಿದೆ.

ಮಹಿಳೆಯ ಶವವನ್ನು ಸಾಗಿಸಲು ಕುಟುಂಬದವರು ಪರದಾಡಿದ್ದಾರೆ. ಕಾಲೋನಿ ತುಂಬೆಲ್ಲ ಮೊಳಕಾಲಿನವರೆಗೆ ನೀರು ನಿಂತಿದ್ದು, ತುಂಬಿ ಹರಿಯುತ್ತಿದ್ದ ನೀರಿನಲ್ಲಿಯೇ ಸಾಗಿ ಶವ ಸಂಸ್ಕಾರ ನೆರವೇರಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!