ಬೆಂಗಳೂರು: ಈಗಿನ ಯುವಕರು ಕ್ರೀಡೆಗಳನ್ನು ಮೈಗೂಡಿಸಿ ಕೊಳ್ಳಬೇಕು. ಕ್ರೀಡೆ ಗಳಿಂದ ಆರೋಗ್ಯ ದೇಹ ಸದೃಢ ಬುದ್ಧಿಶಕ್ತಿ ಹೆಚ್ಚಿಸುತ್ತದೆ ಆದ್ದರಿಂದ ಕ್ರೀಡೆಗಳು ಪ್ರತಿ ಯುವಕರು ಕಲಿಯ ಬೇಕು ಎಂದು ಹಿಂದುಳಿದ ವರ್ಗಗಳ ಗುತ್ತಿಗೆದಾರರ ಸಂಘದ ರಾಜ್ಯ ಉಪಾಧ್ಯಕ್ಷ ರಾಘವೇಂದ್ರ ಎಚ್. ಟಿ ಹೇಳಿದರು.
ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ದೊಡ್ಡಣ್ಣ ಇಂಡಸ್ಟ್ರಿಯಲ್ಎಸ್ಟೇಟ್ ನಲ್ಲಿ ಇರುವ ಕಿರಣ್ ಆಟದ ಮೈದಾನದಲ್ಲಿ ಫ್ಯೂಚರ್ ಸ್ಟಾರ್ ಕಬ್ಬಡ್ಡಿ ವತಿಯಿಂದ ಫ್ರೆಂಡ್ಸ್ ಕಪ್ ಸೀಸನ್.2 ರಾಜ್ಯಮಟ್ಟದ ಕೆಜಿ ವಿಭಾಗದ ಮ್ಯಾಟ್ ಕಬ್ಬಡ್ಡಿಯನ್ನು ಆಯೋಜಕ ಲೋಕೇಶ್ ಅವರ ನೇತೃತ್ವದಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಟಾಸ್ ಹಾಕುವ ಮುಖಾಂತರ ಕ್ರಿಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಬ್ಬಡ್ಡಿ ಪಂದ್ಯಾಟದಲ್ಲಿ ಸುಮಾರು 48 ತಂಡಗಳು ಭಾಗವಹಿಸಿದ್ದು ಸ್ಥಳೀಯ ತಂಡಗಳಾದ ಫ್ಯೂಚರ್ ಸ್ಟಾರ್ ಬಿ ಮತ್ತು ಫ್ಯೂಚರ್ ಸ್ಟಾರ್ ತಂಡಗಳ ಮಧ್ಯೆ ಅಂತಿಮ ಪಂದ್ಯ ನಡೆದು ಫ್ಯೂಚರ್ ಸ್ಟಾರ್ ಬಿ ತಂಡದ ನಾಯಕ ಲೋಕೇಶ್ ಅವರು ಪ್ರತಿ ವರ್ಷ ಹಾಗೂ ಮಂಜುನಾಥ್ ಎಚ್ ಇವರುಗಳು ವಿವಿಧ ಜಿಲ್ಲೆಗಳಿಂದ ಹಾಗೂ ರಾಜ್ಯದಿಂದ ತಂಡಗಳು ಭಾಗವಹಿಸುವುದು ನಮಗೆ ಸಂತೋಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ಅಹಿಂದ ರಕ್ಷಣಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ ವೈ ಜಿ, ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ
ಹೆಚ್ ಮಂಜುನಾಥ್, ಸಂತೋಷ್ ಕುಮಾರ್( ಸಂತು), ಗಿರೀಶ್ ,ರೇವಣ್ಣ, ನಾಗರಾಜ್, ಕೈಗಾರಿಕೋದ್ಯಮಿಗಳು ರಾಜಕೀಯ ಮುಖಂಡರು ಸಂಘ ಸಂಸ್ಥೆಗಳ ಮುಖ್ಯಸ್ಥರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್