Ad imageAd image

ಭಾರತದಲ್ಲಿ ಜನಸಂಖ್ಯಾ ಬೆಳವಣಿಗೆ ದರ ಕುಸಿತ: ಮಹಿಳಾ ಜನಸಂಖ್ಯೆಯಲ್ಲಿ ಹೆಚ್ಚಳ

Bharath Vaibhav
ಭಾರತದಲ್ಲಿ ಜನಸಂಖ್ಯಾ ಬೆಳವಣಿಗೆ ದರ ಕುಸಿತ: ಮಹಿಳಾ ಜನಸಂಖ್ಯೆಯಲ್ಲಿ ಹೆಚ್ಚಳ
WhatsApp Group Join Now
Telegram Group Join Now

ನವದೆಹಲಿವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ರಾಷ್ಟ್ರ ಭಾರತವಾದರೂ, ದೇಶದಲ್ಲಿ ಜನಸಂಖ್ಯಾ ಬೆಳವಣಿಗೆ ದರ ಕ್ರಮೇಣ ಕುಸಿಯುತ್ತಿದೆ. ವೃದ್ಧರ ಸಂಖ್ಯೆ ಹೆಚ್ಚುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೇಂದ್ರೀಯ ಅಂಕಿಅಂಶ ಕಚೇರಿ ಬಿಡುಗಡೆ ಮಾಡಿರುವ, ‘ಭಾರತದಲ್ಲಿ ಮಹಿಳೆಯರು ಮತ್ತು ಪುರುಷರು-2024’ ವರದಿಯಲ್ಲಿ ಈ ಅಂಶ ಉಲ್ಲೇಖವಾಗಿದೆ.

ಜನಸಂಖ್ಯಾ ಬೆಳವಣಿಗೆಯ ಸರಾಸರಿ ವಾರ್ಷಿಕ ಬೆಳವಣಿಗೆ ದರವು ಹಲವು ವರ್ಷಗಳಿಂದ ಕಡಿಮೆಯಾಗುತ್ತಿದೆ ಎಂದು ಅದು ಹೇಳಿದೆ. 1971 ರಲ್ಲಿ ಶೇಕಡಾ 2.2 ರಷ್ಟಿದ್ದ ಈ ಸರಾಸರಿ 2036 ರ ವೇಳೆಗೆ ಶೇಕಡಾ 0.58 ಕ್ಕೆ ಇಳಿಯುತ್ತದೆ ಎಂದು ವರದಿ ಅಂದಾಜಿಸಿದೆ.

ಇದು ದೇಶದಲ್ಲಿ ವೃದ್ಧರ (60 ವರ್ಷಕ್ಕಿಂತ ಮೇಲ್ಪಟ್ಟ) ಜನಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗುತ್ತದೆ. ಪರಿಣಾಮವಾಗಿ, ಅವಲಂಬನಾ ಅನುಪಾತವು ಬದಲಾಗುತ್ತದೆ. ಇಲ್ಲಿಯವರೆಗೆ ಯುವಜನರು ವಯಸ್ಕರ ಮೇಲೆ ಅವಲಂಬಿತರಾಗಿದ್ದರು. ಭವಿಷ್ಯದಲ್ಲಿ, ಯುವಜನರ ಮೇಲೆ ವಯಸ್ಕರ ಅವಲಂಬನೆ ಹೆಚ್ಚಲಿದೆ. ಐತಿಹಾಸಿಕವಾಗಿ ದೇಶವು, ಮಕ್ಕಳು/ಯುವಕರ ದೊಡ್ಡ ಜನಸಂಖ್ಯೆಯನ್ನು ಹೊಂದಿತ್ತು. ಆದರೆ, 2026 ಮತ್ತು 2036 ರ ಜನಸಂಖ್ಯಾ ಮುನ್ಸೂಚನೆಗಳ ಪ್ರಕಾರ ವೃದ್ಧರೇ ಹೆಚ್ಚಲಿದ್ದಾರೆ. ಉದ್ಯೋಗ ಮಾಡುವ ವಯಸ್ಸಿನ ಗುಂಪು ಹೆಚ್ಚಲಿದೆ. ಯುವ ಜನಸಂಖ್ಯೆ ಕಡಿಮೆಯಾದಂತೆ ಹಿರಿಯರ ಸಾಮಾಜಿಕ ಮತ್ತು ಆರ್ಥಿಕ ಜವಾಬ್ದಾರಿಗಳು ಹೆಚ್ಚಾಗುತ್ತವೆ.

ಹೆಚ್ಚುತ್ತಿರುವ ಮಹಿಳಾ ಜನಸಂಖ್ಯೆ: 2011 ರ ಜನಗಣತಿಯ ಪ್ರಕಾರ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಶೇ.48.5 ರಷ್ಟಿತ್ತು. ಇದು 2036 ರ ವೇಳೆಗೆ ಶೇ. 48.8 ಕ್ಕೆ ಹೆಚ್ಚುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, ಪುರುಷ ಜನಸಂಖ್ಯೆಯು ಶೇ. 51.5 ರಿಂದ ಶೇ. 51.5 ಕ್ಕೆ ಇಳಿಯಲಿದೆ. ಕಳೆದ ಕೆಲವು ದಶಕಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಹಿಳಾ ಜನಸಂಖ್ಯೆ ಹೆಚ್ಚಾಗಿದೆ.

ಲಿಂಗಾನುಪಾತವೂ ಹೆಚ್ಚಳ: 1951 ರಲ್ಲಿ 14.67 ಕೋಟಿ ಇದ್ದ ಗ್ರಾಮೀಣ ಮಹಿಳೆಯರ ಸಂಖ್ಯೆ 2036 ರ ವೇಳೆಗೆ 45.67 ಕೋಟಿಗೆ ಹೆಚ್ಚಾಗುವ ನಿರೀಕ್ಷೆಯಿದೆ. ಇದೇ ಅವಧಿಯಲ್ಲಿ ನಗರ ಪ್ರದೇಶದ ಮಹಿಳಾ ಜನಸಂಖ್ಯೆ 2.89 ಕೋಟಿಯಿಂದ 28.59 ಕೋಟಿಗೆ ಹೆಚ್ಚಾಗಲಿದೆ. ಲಿಂಗ ಅನುಪಾತದಲ್ಲಿ ಸಕಾರಾತ್ಮಕ ಪ್ರಗತಿ ಕಂಡುಬಂದಿದೆ. 2011 ರಲ್ಲಿ, ಪ್ರತಿ 1000 ಪುರುಷರಿಗೆ 942 ಮಹಿಳೆಯರಿದ್ದರು. 2036 ರ ವೇಳೆಗೆ ಆ ಸಂಖ್ಯೆ 952 ತಲುಪುವ ನಿರೀಕ್ಷೆಯಿದೆ.

WhatsApp Group Join Now
Telegram Group Join Now
Share This Article
error: Content is protected !!