ನವದೆಹಲಿ : ವೈದ್ಯಕೀಯ ಕ್ಷೇತ್ರಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಿಹಿ ಸುದ್ದಿ ನೀಡಿದ್ದಾರೆ. ಮುಂದಿನ ವರ್ಷ ವೈದ್ಯಕೀಯ ಕಾಲೇಜುಗಳಲ್ಲಿ ಹತ್ತು ಸಾವಿರ ಹೆಚ್ಚುವರಿ ಸೀಟುಗಳನ್ನು ಸೇರಿಸಲಾಗುವುದು ಮತ್ತು ಐದು ವರ್ಷಗಳಲ್ಲಿ 75,000 ಸೀಟುಗಳನ್ನು ಸೇರಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ .
ಮೂರನೇ ಅವಧಿಯ ಮೊದಲ ಪೂರ್ಣ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, ವೈದ್ಯಕೀಯ ಕ್ಷೇತ್ರ ಸುಧಾರಣೆಗೆ ಪಿಎಂ ಮೋದಿ ವಿಶೇಷ ಕಾಳಜಿ ವಹಿಸಿದ್ದಾರೆ.
ಹೆಚ್ಚಿನ ಅನುದಾನವನ್ನು ಅದಕ್ಕಾಗಿ ಮೀಸಲಿಟ್ಟಿದ್ದಾರೆ. ಆರೋಗ್ಯ ವೈದ್ಯಕೀಯ ಕ್ಷೇತ್ರ ಸುಧಾರಣೆಯದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.
10 ಸಾವಿರ ಫೆಲೋಶಿಪ್..!
PM ರಿಸರ್ಚ್ ಫೆಲೋಶಿಪ್ ಯೋಜನೆಯಡಿಯಲ್ಲಿ 10,000 ಫೆಲೋಶಿಪ್‌ಗಳನ್ನು ಒದಗಿಸಲಾಗುವುದು ಹಾಗೆಯೇ ಐಐಟಿ ಮತ್ತು ಐಐಎಸ್‌ಸಿಯಲ್ಲಿ ತಾಂತ್ರಿಕ ಸಂಶೋಧನೆಗಾಗಿ ಮುಂದಿನ ಐದು ವರ್ಷಗಳಲ್ಲಿ PM ರಿಸರ್ಚ್ ಫೆಲೋಶಿಪ್ ಯೋಜನೆಯಡಿ 10,000 ಫೆಲೋಶಿಪ್‌ಗಳನ್ನು ಒದಗಿಸಲಾಗುವುದು ಎಂದು ಬಜೆಟ್ ನಲ್ಲಿ ನಿರ್ಮಾಲಾ ಘೋಷಿಸಿದ್ದಾರೆ.