ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ವಸ್ತುಗಳ ಬೆಲೆ ಹೆಚ್ಚುತ್ತಲೆ ಇವೆ. ಮದ್ಯದ ಬೆಲೆ, ನಂತರ ಸಾರಿಗೆ ಬಸ್ ಪ್ರಯಾಣ, ಹಾಲಿನ ದರ, ನಮ್ಮ ಮೆಟ್ರೋ ದರ, ಇದೀಗ ವಿದ್ಯುತ್ ದರ ಹೆಚ್ಚಳ ಮಾಡುವಂತೆ ಆದೇಶಿಸಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಏಪ್ರಿಲ್ 1ರಿಂದಲೇ ನೂತನ ದರ ಜಾರಿಗೆ ಗುರುವಾರ ಆದೇಶಿಸಿದೆ.
ಇತ್ತೀಚೆಗಷ್ಟೇ ನೀರಿನ ದರ ಹೆಚ್ಚಿಸಲು ಚಿಂತನೆ ಆರಂಭಿಸಿದ್ದ ರಾಜ್ಯ ಸರ್ಕಾರ ಇದೀಗ ಬಹುದಿನಗಳಿಂದ ಪ್ರಸ್ತಾಪಿಸಲಾಗಿದ್ದ ವಿದ್ಯುತ್ ದರ ಏರಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಸರ್ಕಾರ ಕರೆಂಟ್ ದರ ಏರಿಕೆಯ ಶಾಕ್ ನೀಡಿದೆ.
ಕಳೆದ ವರ್ಷಗಳಿಗಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಬೆಲೆ ಏರಿಕೆ ಆಗಿದೆ. 36 ಪೈಸೆ ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿದೆ. ಮುಂದಿನ ಎರಡು ವರ್ಷ ಅಂದರೆ 2028ರವರೆಗೆ ವಿದ್ಯುತ್ ದರ ಎಷ್ಟಿರಲಿದೆ ಎಂದು ಸರ್ಕಾರ ತಿಳಿಸಿದ. ಈ ಪೈಕಿ ಇದೇ ವರ್ಷದಲ್ಲಿ 2025-26ರಲ್ಲಿ ಅತ್ಯಧಿಕ ಬೆಲೆ ಹೆಚ್ಚಾಗಿರುವುದು ಗೊತ್ತಾಗಿದೆ. ಈ ದರ ಏರಿಕೆಗೆ ರಾಜ್ಯದ ಜನರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಲಿದ್ದಾರೆ ಎಂದರು.