Ad imageAd image

ಪಟ್ಟಣದಲ್ಲಿ ಹೆಚ್ಚಿದ ಫುಟ್ ಪಾತ್ ಒತ್ತುವರಿ,ಜನರಿಗೆ ದೊಡ್ಡ ಸಮಸ್ಯೆ

Bharath Vaibhav
ಪಟ್ಟಣದಲ್ಲಿ ಹೆಚ್ಚಿದ ಫುಟ್ ಪಾತ್ ಒತ್ತುವರಿ,ಜನರಿಗೆ ದೊಡ್ಡ ಸಮಸ್ಯೆ
WhatsApp Group Join Now
Telegram Group Join Now

ಮಾನ್ವಿ:-ಪುರಸಭೆ ಮುಖ್ಯಾಧಿಕಾರಿ ಗಂಗಾಧರಪ್ಪ ಎಲ್ಲಿದ್ದೀಯಪ್ಪ ಸಮಸ್ಯೆ ನೋಡಪ್ಪ,ಗೂಡಂಗಡಿಗಳ ಹಾವಳಿಗೆ ಸಂಚಾರಕ್ಕೆ ತೊಂದರೆ ಮಾನ್ವಿ‌ ಆಡಳಿತ‌ ದುರಾಡಳಿತ ಎಂದ ಡಾಕ್ಟರ್ ರೋಹಿಣಿ ಮಾನ್ವಿಕರ್ ,ರಾಯಚೂರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದರು ಕ್ಯಾರೆ ಅನ್ನದ ಗಂಗಾಧರಪ್ಪ

ಮಾನ್ವಿ ನಗರವನ್ನು ಸ್ವಚ್ಛವಾಗಿಡಬೇಕಾದ ಪುರಸಭೆ ಮುಖ್ಯಾಧಿಕಾರಿ ಗಂಗಾಧರಪ್ಪ ಅದ್ಯಾವ ರೀತಿಯಲ್ಲಿ ಡ್ಯೂಟಿ ಮಾಡುತ್ತಾರೆಂದು ಫುಟ್ ಪಾತ್ ನಲ್ಲಿ ಗೂಡಂಗಡಿಗಳನ್ನಿಟ್ಟಿರುವುದೆ ಸಾಕ್ಷಿಯಾಗಿದೆ.

ಮಾನ್ವಿ ಪಟ್ಟಣದ ಬಹುತೇಕ ರಸ್ತೆಗಳು ಸೇರಿದಂತೆ ಪಂಪಾ ಕಾಂಪ್ಲೆಕ್ಸ್ ನ ರಸ್ತೆಯಲ್ಲಿ ಡಬ್ಬಿಗಳ ಹಾವಳಿಯಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಲ್ಲದೆ, ಇಲ್ಲಿ ಆಂಬ್ಯಲೆನ್ಸ್ ಬರಬೇಕೆಂದರೆ ಹರಸಾಹಸ ಪಡಬೇಕಾಗಿದೆ.

ಪುರಸಭೆ ಮುಖ್ಯಾಧಿಕಾರಿ ಗಂಗಾಧರಪ್ಪ ಫುಟ್ ಪಾತ್ ಗಳಲ್ಲಿ ಡಬ್ಬಿಗಳನ್ನು ತೆರವುಗೊಳಿಸದೆ ಮತ್ತಷ್ಟು ಗೂಡಂಗಡಿಗಳನ್ನು ಇಡೋಕೆ ಅವಕಾಶ ಕೊಡುತ್ತಿದ್ದಾರೆಂದು ಸಾರ್ವಜನಿಕರು ಗಂಗಾಧರಪ್ಪ ವಿರುದ್ಧ ಕಿಡಿಕಾರಿದ್ದಾರೆ.

ವರದಿ:-ಶಿವತೇಜ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!