ಅಥಣಿ : ಬೆಳಗಾವಿಯಲ್ಲಿ ನಡೆಯುತ್ತಿರು ಚಳಿಗಾಲದ ಅಧಿವೇಶನದಲ್ಲಿ ಅಥಣಿ ಜಿಲ್ಲಾ ಕೇಂದ್ರವನ್ನಾಗಿ ಮತ್ತು ತೆಲಸಂಗ ತಾಲೂಕು ಘೋಷಣೆ ಮಾಡಬೇಕು ಎಂದು ತೆಲಸಂಗ ಗ್ರಾಮಸ್ಥರು ಒತ್ತಾಯಿಸಿದರು ಅವರು ಮಂಗಳವರ ಅಂಬೇಡ್ಕರ್ ಸರ್ಕಲ್ ನಲ್ಲಿ ಮಾನವ ಸರಪಳಿ ಮಾಡಿ ಘೊಷಣೆ ಹಾಕಿದರು.
ಅಥಣಿ ಜಿಲ್ಲೆಯಾದರೆ ಈ ಭಾಗದ ಯುವಕರಿಗೆ ಹೆಚ್ಚಿನ ಉದ್ಯೋಗ ಅವಕಾಶ ಮತ್ತು ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರಲಿದೆ ಈಗ ಬೆಳಗಾವಿಗೆ ಹೋಗಿಬರಬೇಕಾದರೆ 200 ಕಿ ಮೀ .ಹೋಗಬೇಕಾಗಿದೆ ಇದರಿಂದ ಈ ಭಾಗದ ರೈತರಿಗೆ ಅನಾನುಕೂಲ ಉಂಟಾಗುತ್ತಿದೆ ಆದರಿಂದ ನಾಳೆ ಬುಧವಾರ ನಡೆಯುವ ಅಥಣಿ ಬಂದ ಕರೆಗೆ ತೆಲಸಂಗ ಗ್ರಾಮಸ್ಥರು ಸಂಪೂರ್ಣ ಬೆಂಬಲ ಕೂಡುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತೆಲಸಂಗ ತಾಲೂಕು ಹೋರಾಟ ಸಮಿತಿ ಅಧ್ಯಕ್ಷರಾದ ಶ್ರೀಸೈಲ ಶೇಲೇಪ್ಪಗೊಳ ಧರೇಪ್ಪ ಮಾಳಿ ಆನಂದ ತಯಕಾರ ಸಂದೀಪ್ ಉಂಡೊಡಿ ಸಿದ್ದಲಿಂಗ ಮಾದರ ಸುನೀಲ ಶ್ರವಣಕುಮಾರ ಸೂರ್ಯವಂಶಿ ಸೇರಿದಂತೆ ಅನೇಕರು ಉಪಸ್ಥಿತಿ ಇದ್ದರು.
ವರದಿ : ಆಕಾಶ ಮಾದರ




