ಬಾಗೇಪಲ್ಲಿ: ದಿವಂಗತ ಜಿ ಆರ್ ನಾರಾಯಣಸ್ವಾಮಿ ಆಗಲ ಗುರ್ಕಿ ಗ್ರಾಮದ ಚಿಕ್ಕಬಳ್ಳಾಪುರ ತಾಲೂಕು ಮತ್ತು ಜಿಲ್ಲೆ ಇವರ 87 ನೇ ಹುಟ್ಟು ಹಬ್ಬದ ಪ್ರಯುಕ್ತ ಇವರ ಶ್ರೀಮತಿ ಕೃಷ್ಣಮ್ಮ ಮತ್ತು ಮೊಮ್ಮಕ್ಕಳು ಹಾಗೂ ಅವರ ಶಿಷ್ಯ ವೃಂದದವರು ಭಾಗವಹಿಸಿ ಪ್ರತಿ ವರ್ಷದಂತೆ ಬಾಗೇಪಲ್ಲಿ ತಾಲೂಕು ಗೂಳೂರು ಮಠದ ಅನಾಥಾಶ್ರಮದಲ್ಲಿ ವೃದ್ಧರಿಗೆ ಮತ್ತು ಅನಾಥ ಮಕ್ಕಳಿಗೆ ಊಟ ಹಾಗೂ ತಟ್ಟೆ ಲೋಟ. ಬೆಡ್ ಶೀಟ್ ಮತ್ತು ಟವಲ್ಲುಗ ಳನ್ನು ವಿತರಿಸಿ ಮಾತನಾಡಿ ಅವರು ಶ್ರೀಯುತ ದಿವಂಗತ ಜಿ ಆರ್ ನಾರಾಯಣಸ್ವಾಮಿ ರವರು ಅನೇಕ ಸಾಮಾಜಿಕ ಧಾರ್ಮಿಕ ಕೆಲಸಗಳನ್ನು ನಿರ್ವಹಿಸಿದ್ದು ಅದರಲ್ಲಿ ಬಹು ಮುಖ್ಯವಾಗಿ ಅಗಲಗುರ್ಕಿ ಗ್ರಾಮ ಪಂಚಾಯತಿಯ ಪ್ರಧಾನ ರಾಗಿ , ಚಿಕ್ಕಬಳ್ಳಾಪುರ ತಾಲೂಕು ಪಂಚಾಯತಿ ಅಧ್ಯಕ್ಷರಾಗಿ ಎರಡು ಸಲ ಹಾಗೂ ಜಿಲ್ಲಾ ಪಂಚಾಯತಿಯ ಸದಸ್ಯರಾಗಿ ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಹಾಗೂ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಉತ್ತಮ ಸೇವೆಯನ್ನು ಮಾಡಿ ನಿಧನರಾದರು. ಸಹ ಅವರು ಮಾಡಿರುವ ಸೇವೆಗಳು ಅಮರವಾಗಿ ಉಳಿದಿರುತ್ತವೆ.
ಅಲ್ಲದೆ ಇತ್ತೀಚಿನ ದಿನಗಳಲ್ಲಿ ಅಥವಾ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬೆಳೆದಂತೆಲ್ಲ ಜನರು ಅಥವಾ ತಮ್ಮ ತಂದೆ ತಾಯಿಗಳನ್ನು ಸಾಕುವಂತ ಗೋಜಿಗೆ ಹೋಗುತ್ತಿಲ್ಲ ಅವರನ್ನು ವೃದ್ದಾಶ್ರಮಗಳಿಗೆ ಅನಾಥಾಶ್ರಮಗಳಿಗೆ ಕಳಿಸುತ್ತಿರುವುದು ಕಾಣಬಹುದಾಗಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅನಾಥವಾಗಿ ಅನಾಥಾಶ್ರಮಗಳಲ್ಲಿ ಜೀವಿಸುತ್ತಿರುವ ವೃದ್ಧರಿಗೆ ನಾವು ಅವರಿಗೆ ಬೇಕಾಗುವಂತಹ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸುತ್ತೇವೆ. ವೃದ್ಧಾಪ್ಯ ವಯಸ್ಸಿನಲ್ಲಿ ಮಕ್ಕಳು ತಮ್ಮ ತಂದೆ ತಾಯಿಯ ಜೊತೆಯಲ್ಲಿ ಜೀವನವನ್ನು ನಡೆಸಬೇಕು ಮಕ್ಕಳನ್ನು ಜೋಪಾನವಾಗಿ ಬೆಳೆಸಿ ಉನ್ನತ ಮಟ್ಟದ ಉದ್ಯೋಗಗಳಿಗೆ ಕಳಿಸಿಕೊಟ್ಟಂತಹ ಮಕ್ಕಳು ತಂದೆ ತಾಯಿಯ ವೃದ್ಧಾಪ್ಯ ಸಮಯದಲ್ಲಿ ಅನಾಥಾಶ್ರಮಗಳ ಬಿಡುವಂತಹ ಸ್ಥಿತಿಯನ್ನು ಇದನ್ನ ಬಿಡಬೇಕಾಗಿದೆ.
ತಂದೆ ತಾಯಿಗಳು ಇಡೀ ತಮ್ಮ ಜೀವನವನ್ನು ಮಕ್ಕಳಿಗಾಗಿ ಮುಡುಪಾಗಿಟ್ಟಿರುತ್ತಾರೆ ಅಂತಹ ಮಕ್ಕಳು ತಂದೆ ತಾಯಿಗಳು ವಯಸ್ಸಾದ ನಂತರ ಅನಾಥಾಶ್ರಮಗಳೇ ಬಿಟ್ಟು ಮೋಜು-ಮಸ್ತಿ, ದುಂದು ವೆಚ್ಚ ಇತ್ಯಾದಿಗಳನ್ನ ಮಾಡುತ್ತಿದ್ದಾರೆ ಇವುಗಳನ್ನ ಪರಿವರ್ತನೆ ಮಾಡಿಕೊಂಡು ನಮ್ಮ ತಂದೆ ತಾಯಿಯ ನಮಗೆ ದೇವರೆಂದು ಭಾವಿಸಿ ಅವರಿಗೆ ಸೇವೆಯನ್ನು ಮಾಡಿದಾಗ ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಕಾರ್ಯಕ್ರಮಕ್ಕೆ ದಿವಂಗತರವರ ಧರ್ಮಪತ್ನಿ ಶ್ರೀಮತಿ ಕೃಷ್ಣಮ್ಮ ಕಂಟ್ರಾಕ್ಟರ್ ಮಂಜುನಾಥ್ ಅವರ ಧರ್ಮಪತ್ನಿ ಸರೋಜಮ್ಮ ಶಾಂತಮ್ಮ ಮೂರ್ತಣ್ಣ, ಗಿರಿಜಮ್ಮ, ಸುನಿತಾ ಮೊಮ್ಮಕ್ಕಳದ ನೇತ್ರಾವತಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿಯವರಾದ ಅಶ್ವಥ್ ನಾರಾಯಣಪ್ಪ ತುಮಕುಂಟೆ ವೆಂಕಟರೆಡ್ಡಿ
ಆಗಲಗುರ್ಕಿ ಗ್ರಾಮದ ಶ್ರೀನಿವಾಸ್ ಹಾಗೂ ವಕೀಲರಾದ ನಾಗಭೂಷಣ್ ಮತ್ತು ಬಾಲೆ ನಾಯಕ್ ಇತರರು ಪಾಲ್ಗೊಂಡು ದಿನಪೂಪೂರ್ತಿ ಅನಾಥ ವೃದ್ಧಾಶ್ರಮದಲ್ಲಿ ವೃದ್ಧರ ಜೊತೆ ದಿವಂಗತ ಜಿ. ಆರ್. ನಾರಾಯಣಸ್ವಾಮಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ವರದಿ :ಯಾರಬ್. ಎಂ.