Ad imageAd image

ಹುಬ್ಬಳ್ಳಿ ದೇಶಾಭಿಮಾನ ರೂಡಿಸಿಕೊಳ್ಳಿ

Bharath Vaibhav
ಹುಬ್ಬಳ್ಳಿ ದೇಶಾಭಿಮಾನ ರೂಡಿಸಿಕೊಳ್ಳಿ
WhatsApp Group Join Now
Telegram Group Join Now

ಹುಬ್ಬಳ್ಳಿ :– ಜಿಲ್ಲಾಡಳಿತ, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಇತಿಹಾಸ ಉಪನ್ಯಾಸಕರ ಸಂಘ ಜಿಲ್ಲಾ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಅಖಂಡ ಧಾರವಾಡ ಜಿಲ್ಲೆಯ ಸ್ವಾತಂತ್ರ್ಯ  ಹೋರಾಟಗಾರರ ಕುರಿತ 72 ಉಪನ್ಯಾಸ ಮಾಲಿಕೆಗಳ ಕಾರ್ಯಕ್ರಮದ ಉದ್ಘಾಟಸಿ ,

ಸರ್ಕಾರಿ ಪದವಿಪೂರ್ವ ಕಾಲೇಜು ಗೋಪನಕೊಪ್ಪ ದಲ್ಲಿ ನಡೆಯಿತು.ಶ್ರೀ ಪ್ರಕಾಶ್ ಸುಣಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉದ್ಘಾಟಕರಾಗಿ ಶ್ರೀ ಬೀರಪ್ಪ ಖಂಡೇಕರ್, ಮಾನ್ಯ ಸದಸ್ಯರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ. ಉದ್ಘಾಟಿಸಿ ಸ್ವತಂತ್ರ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನ ಸ್ಮರಿಸಿ ವಿದ್ಯಾರ್ಥಿಗಳು ಉತ್ತಮ ನಾಯಕತ್ವದ ಜೊತೆಗೆ ಮಾನವೀಯತೆ ಆರೋಗ್ಯ ಸಂಪತ್ತನ್ನ ಪಡೆದುಕೊಳ್ಳಿ, ಕಲಿತ ಕಾಲೇಜು ಹೆತ್ತವರನ್ನು ಮರೆಯದಿರಿ, ಸಮಾಜ ಸೇವಕರಾಗಿ ಎಂದು ಕರೆ ನೀಡಿದರು.

ಶ್ರೀಮತಿ ಶೋಭಾ ಮಂಗಸೂಳೆ ಪ್ರಾಚಾರ್ಯರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಭಾರತ ಮಾತೆಯ ಗೀತೆ ಹಾಡುವುದರ ಮೂಲಕ ಸ್ವಾತಂತ್ರ್ಯ ವೀರರನ್ನು ಸ್ಮರಿಸಿ ಇತಿಹಾಸವೆಂದರೆ ಕೇವಲ ಘಟನೆಗಳೆಲ್ಲ ಜೀವನದ ಮೌಲ್ಯಗಳನ್ನು ಬಿಂಬಿಸಿ ಜನರು ಅವುಗಳನ್ನ ರೂಡಿಳಸಿಕೊಳ್ಳುವಂತೆ ಪ್ರಚೋದಿಸಬೇಕು. ಸ್ವಾತಂತ್ರ್ಯ ವೀರರನ್ನ ಕೈಮುಗಿದು ಅವರನ್ನು ನೆನೆದು ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಶ್ರೀ ಮಂಜುನಾಥ ಮೇಟಿ ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ ಜೀವನ, ಕೃತಿಗಳು, ಸ್ವಾತಂತ್ರ್ಯ ಹೋರಾಟದ ಚಲನೆಯ ಜೊತೆ ಅವರ ಕರ್ನಾಟಕ ಏಕೀಕರಣ ಹಾಗೂ ಕರ್ನಾಟಕದ ತಾಳಮೇಳಗಳಂತೆ ಸಾಗಿದ್ದು ಇಲ್ಲಿ ಸ್ಮರಣೀಯ, ಕರ್ನಾಟಕದ ಏಕೀಕರಣದ ಜೊತೆಗೆ ರಾಷ್ಟ್ರಿಯ ಚಳುವಳಿಯಲ್ಲಿ ತಮ್ಮನ್ನ ತೊಡಗಿಸಿಕೊಂಡ ಧೀಮಂತ ನಾಯಕ ಆಲೂರು ವೆಂಕಟರಾಯರ ಕುರಿತು ಉಪನ್ಯಾಸ ನೀಡಿದರು.

ಶ್ರೀ ರಾಮು ಮೂಲಗಿ ಇವರ ಕಲಾತಂಡ ಜನಪದ ಗೀತೆ ಲಾವಣಿ ಪದಗಳಲ್ಲಿ ಮೈಲಾರ ಮಹಾದೇವಪ್ಪ, ಅಂದಾನಪ್ಪ ದೊಡ್ಡಮೇಟಿ,ರಾ ಹ ದೇಶಪಾಂಡೆ, ಜಕನಿ ಬಾವಿ, ಮಹಿಳಾ ವಿದ್ಯಾಪೀಠದಲ್ಲಿರುವ ಗಾಂಧೀಜಿಯವರ ಚಿತಾಬಸ್ಮ. ಮುಂತಾದ ರಾಷ್ಟ್ರೀಯ ಸ್ಮಾರಕಗಳು ಹಾಗೂ ಹುತಾತ್ಮರ ಜೀವನ ಚರಿತ್ರೆ ಮತ್ತು ಹೋರಾಟದ ಮಜಲುಗಳನ್ನು ಕುರಿತ ಹಾಡುಗಳನ್ನು ಕಟ್ಟಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಸ್ಮರಿಸಿದರು ಹಾಗೂ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿಯನ್ನು ತುಂಬಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಉದಯ ನಾಯಕ್ ಅಧ್ಯಕ್ಷರು ಉಪನ್ಯಾಸಕರ ಸಂಘ ಧಾರವಾಡ.ಶ್ರೀ ಪ್ರಕಾಶ ಹೊಸಮನಿ ಜಂಟಿ ನಿರ್ದೇಶಕರು ಕಾಲೇಜ್ ಶಿಕ್ಷಣ ಇಲಾಖೆ. ಸ್ವಾತಂತ್ರ್ಯ ಹೋರಾಟಗಾರರ ಕುರಿತ ಪುಸ್ತಕ ಮೇಳವನ್ನು ಉದ್ಘಾಟಿಸಿದರು. ಶ್ರೀ ಹನುಮಂತಗೌಡ ಡಿ ಎಂ. ವಿಶೇಷ ಅಧಿಕಾರಿಗಳು ಕಾಲೇಜು ಶಿಕ್ಷಣ ಇಲಾಖೆ ಮುಂತಾದವರು ಉಪಸ್ಥಿತರಿದ್ದರು.. ಉಪನ್ಯಾಸಕರಾದ ಶ್ರೀಮತಿ ಪಾರ್ವತಿ ಹಿರೇಮಠ ನಿರೂಪಿಸಿದರು. ಉಪನ್ಯಾಸಕರು ಶ್ರೀ ನಾಗರಾಜ ನೇಶ್ವಿ ವಂದಿಸಿದರು.

ವರದಿ:- ನಿತೀಶಗೌಡ ತಡಸ ಪಾಟೀಲ್ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!