Ad imageAd image

ಹೋರಾಟಗಾರರ ಪರಿಶ್ರಮದ ಫಲವೇ ಸ್ವಾತಂತ್ರ್ಯೋತ್ಸವ : ವಿ. ನಾಗರಾಜ್ 

Bharath Vaibhav
ಹೋರಾಟಗಾರರ ಪರಿಶ್ರಮದ ಫಲವೇ ಸ್ವಾತಂತ್ರ್ಯೋತ್ಸವ : ವಿ. ನಾಗರಾಜ್ 
WhatsApp Group Join Now
Telegram Group Join Now

ಬೆಂಗಳೂರು : ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ದೇಶ ಭಕ್ತರನ್ನು ಮರೆಯಬಾರದು ಸ್ವಾತಂತ್ರ್ಯ ಕ್ಕಾಗಿ ಹೋರಾಟಗಾರರ ತ್ಯಾಗ ಬಲಿದಾನದಿಂದಷ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಅದಕ್ಕಾಗಿ ಹೋರಾಟಗಾರರನ್ನು ಸ್ಮರಿಸ ಬೇಕು ಎಂದು ಕಾಂಗ್ರೆಸ್ ಬಿಬಿಎಂಪಿ ಪ್ರಭಲ ಆಕಾಂಕ್ಷಿ ಅಭ್ಯರ್ಥಿ ವಿ. ನಾಗರಾಜ್ ಅಂದ್ರಹಳ್ಳಿ ಹೇಳಿದರು.

ನಮ್ಮ ನಾಯಕರು ಮಾಜಿ ಸಚಿವರು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅವರ ಮಾರ್ಗದರ್ಶನ ಮತ್ತು ಅವರ ಆಶಿರ್ವಾದ ದಿಂದ ದೊಡ್ಡ ಬಿದರಿಕಲ್ಲು ವಾರ್ಡಿನ ಚನ್ನಾಯಕನಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ೭೯ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಪತಿ ಮಹಾತ್ಮಾ ಗಾಂಧಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಈ ಇಬ್ಬರ ಮಹಾನೀಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿ. ನಾಗರಾಜ್ ಮಾತನಾಡಿ ಅರೆಕಾಲಿಕ ಶಿಕ್ಷಕಿಯಾದ ಶೈಲಜಾ ಅವರಿಗೆ ಎರಡು ತಿಂಗಳ ಸಂಭಾವನೆ ನೀಡಿ ಗೌರವಿಸಿ ಶಾಸಕ ಎಸ್ ಟಿ ಸೋಮಶೇಖರ್ ಅವರ ಅಭಿವೃದ್ಧಿ ಯ ಬಗ್ಗೆ ಎಳೆಎಳೆಯಾಗಿ ನೆರೆದಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ವಿ. ನಾಗರಾಜ್ ಮಾತನಾಡಿದರು.

ಈ ಸಂದರ್ಭದಲ್ಲಿ ದೊಡ್ಡ ಬಿದರಿಕಲ್ಲು ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಲಿಖಿತ್ ಗೌಡ್ರು, ಹಿರಿಯ ಮುಖಂಡ ಗಂಗರಾಜು, ಲಕ್ಷ್ಮೀಪತಿ, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಲಕ್ಷ್ಮೀ, ಕಾರ್ಯಾಧ್ಯಕ್ಷೆ ಶೀಲಾ ಚಂದ್ರಶೇಖರ್, ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕ ಶಿಕ್ಷಕಿಯರು ಚನ್ನಾಯಕನಪಾಳ್ಯದ ಹಿರಿಯ ಮುಖಂಡರು ಮಹಿಳೆಯರು ಮುಂತಾದವರು ಉಪಸ್ಥಿತರಿದ್ದರು.

ವರದಿ: ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!