ಬಾದಾಮಿ:- ಬಾಗಲಕೋಟೆ ಜಿಲ್ಲೆಯ ಚಾಲುಕ್ಯರ ನಾಡು ಬಾದಾಮಿಯ ಮಲಪ್ರಭಾ ಶಿಕ್ಷಣ ಸಂಸ್ಥೆಯ ಜ್ಞಾನಂಗಂಗಾ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ ದಿನಾಚರಣೆ ಧ್ವಜರೋಹಣ ಕಾರ್ಯಕ್ರಮ ನೆರವೇರಿತು.
ಇನ್ನು ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ಪೋಷಕುಗಳನ್ನು ಧರಿಸಿ ಕಾರ್ಯಕ್ರಮದಲ್ಲಿ ಮೆರಗು ತಂದರು. ಧ್ವಜಾರೋಹಣಕ್ಕೂ ಮುಂಚೆ ವಿದ್ಯಾರ್ಥಿಗಳು ಮಾರ್ಚ್ ಫಾಸ್ಟ್ ಮೂಲಕ ಶಾಲೆಯ ಚೆರ್ಮನ್ನರಾದ ಬಿ. ಪಿ ಹಳ್ಳೂರ ವಕೀಲರಿಗೆ ಸೆಲ್ಯೂಟ್ ಮಾಡಿ ಗೌರವ ವಂದನೆಗಳನ್ನು ಸಲ್ಲಿಸಿ ಧ್ವಜರೋಹಣ ನೆರವೇರಿಸಿದರು.
ಇನ್ನು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸ್ವಾತಂತ್ರದ ಬಗ್ಗೆ ಭಾಷಣ ಮಾಡಿದರು. ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಿ ಗಮನ ಸೆಳೆದರು.
ಕಾರ್ಯಕ್ರಮದ ಶುರುವಾತಿನಲ್ಲಿಯೇ ಸನಪೀಸ್ಟ್ ಚಾಕಲೇಟ್ ಕಂಪನಿಯವರು ಪ್ರತಿ ವರ್ಷದಂತೆ ಈ ವರ್ಷವೂ ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರ ವೃಂದದವರಿಗೂ ಸನಪೀಸ್ಟ್ ಕಂಪನಿಯ ಚಾಕಲೇಟ್ ಗಳನ್ನು ಉಚಿತವಾಗಿ ನೀಡಿದ್ದು ವಿಶೇಷವಾಗಿತ್ತು.
ಮಲಪ್ರಭಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಚೇರಮನ್ನರೂ ಆದ ಬಿ. ಪಿ. ಹಳ್ಳೂರ ವಕೀಲರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಇನ್ನು ಸಂಪೂರ್ಣ ಕಾರ್ಯಕ್ರಮವನ್ನು ಶಾಲೆಯ ಸಹಶಿಕ್ಷಕಿಯಾದ ಕುಮಾರಿ ರಂಜನಾ ನಾಯಕ ನಿರೂಪಣೆ ಮಾಡಿದರು. ಇನ್ನು ಮುಖ್ಯ ಗುರುಮಾತೆಯರಾದ ಪೂಜಾ ಲೆಂಕೆಣ್ಣವರ ಇಡೀ ಕಾರ್ಯಕ್ರಮದ ಸಾರತ್ಯ ವಹಿಸಿದ್ದರು.ಇನ್ನುಳಿದಂತೆ ಶಾಲಾ ಸರ್ವ ಶಿಕ್ಷಕಿಯರು ಸಿಬ್ಬಂದಿ ವರ್ಗ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ:- ರಾಜೇಶ್. ಎಸ್. ದೇಸಾಯಿ