Ad imageAd image

ಸ್ವಾತಂತ್ರ್ಯೋತ್ಸವ ನಮ್ಮೆಲ್ಲರ ಆದ್ಯ ಕರ್ತವ್ಯ” ರೆ.ಬ್ರ. ವರ್ಗಿಸ್ K.J, 15.08.2024 ರಂದು

Bharath Vaibhav
ಸ್ವಾತಂತ್ರ್ಯೋತ್ಸವ ನಮ್ಮೆಲ್ಲರ ಆದ್ಯ ಕರ್ತವ್ಯ” ರೆ.ಬ್ರ. ವರ್ಗಿಸ್ K.J, 15.08.2024 ರಂದು
WhatsApp Group Join Now
Telegram Group Join Now

ಕಲಘಟಗಿ:– ಗುಡ್ ನ್ಯೂಸ್ ವೆಲ್ಫೇರ್ ಸಂಸ್ಥೆಯ ಅಂಗ ಶಿಕ್ಷಣ ಸಂಸ್ಥೆಗಳಾದ ಪದವಿ,ಪದವಿ ಪೂರ್ವ ಮಹಾವಿದ್ಯಾಲಯಗಳು, ಗೃಹಿಣಿ ತರಬೇತಿ ಕೇಂದ್ರ, ಪ್ಲೇ ಸ್ಕೂಲ್ ಗಳ ಸಂಯುಕ್ತ ಆಶ್ರಯದಲ್ಲಿ 78ನೆಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗುಡ್ ನ್ಯೂಸ್ ವೆಲ್ಪರ್ ಸಂಸ್ಥೆಯ ಕಾರ್ಯದರ್ಶಿಗಳಾದ ವರ್ಗಿಸ್ K.J ರವರನ್ನು ರೋವರ್ ಸ್ಕೌಟ್ಸ್ ಮತ್ತು ಎನ್ಎಸ್ಎಸ್ ವಿದ್ಯಾರ್ಥಿಗಳು ಪರೇಡ್ ಮೂಲಕ ಸ್ವಾಗತಿಸಿದರು.

ಅವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಸ್ವಾತಂತ್ರ್ಯೋತ್ಸವ ಉದ್ದೇಶಿಸಿ ಮಾತನಾಡುತ್ತ ಭಾರತ ಸ್ವಾತಂತ್ರ್ಯ ಗಳಿಸುವಲ್ಲಿ ಅನೇಕ ಮಹಾನ್ ವ್ಯಕ್ತಿಗಳು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಮಹಾತ್ಮ ಗಾಂಧೀಜಿ,ದಾದಾಬಾಯಿ ನವರೋಜಿ,ಕರ್ನಾಟಕದ ಮೈಲಾರ ಮಹಾದೇವ, ಕಿತ್ತೂರ್ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರ ತ್ಯಾಗ,ಬಲಿದಾನದಿಂದ ಇಂದಿನ ಪ್ರಜೆಗಳು ಸುಖ ಸಮೃದ್ಧಿಯಿಂದ ಬದುಕುತ್ತಿದ್ದೇವೆ.

ನಾವು ಅವರಿಗೆ ಕೃತಜ್ಞರಾಗಿರಬೇಕು. ಭಾರತ ಹೆಚ್ಚು ಗ್ರಾಮೀಣ ಪ್ರದೇಶ ಹೊಂದಿದ್ದು ಸಮೃದ್ಧ ಯುವ ಶಕ್ತಿ ಹೊಂದಿದ ದೇಶವಾಗಿದ್ದು ಭವಿಷ್ಯತ್ತಿನ ಭಾರತದ ನಿರ್ಮಾಣದಲ್ಲಿ ತಮ್ಮ ಪಾತ್ರ ಮುಖ್ಯವಾಗಿದೆ. ಹೀಗಾಗಿ ಸ್ವಾತಂತ್ರ್ಯೋತ್ಸವ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಪದವಿ ಮಹಾ ವಿದ್ಯಾಲಯದ ಪ್ರಾ ಚಾರ್ಯರಾದ ಡಾ. ಎಂ.ಡಿ ಹೊರಕೇರಿ ಯವರು ಸ್ವಾತಂತ್ರ್ಯದಲ್ಲಿ ಭಾಗಿಯಾದ ಮಹಾತ್ಮರನ್ನು ಸ್ಮರಿಸಿದರು. ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ನವೀನಾ ರೆಡ್ಡೇರರವರು ಭಾರತವು ಪ್ರಗತಿ ಹೊಂದುತ್ತಿರುವ ರಾಷ್ಟ್ರ ಎನ್ನುವುದರ ಬದಲು ಪ್ರಗತಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ವಿದ್ಯಾರ್ಥಿಗಳೆಲ್ಲರ ಕರ್ತವ್ಯವಾಗಿದೆ ಎಂದರು.

ಡಾ. ಸಂಗಮೇಶ ಹಂಡಗಿ ಅತ್ಯುತ್ತಮ ಗ್ರಾಮೀಣ ಲೇಖನ ಪ್ರಶಸ್ತಿ ಪಡೆದ ಶ್ರೀ ಪ್ರಲ್ಹಾದಗೌಡ ಗೊಲ್ಲಗೌಡರ ಅವರಿಗೆ ಸನ್ಮಾನಿಸಲಾಯಿತು. ಕಲಘಟಗಿಯ ಉನ್ನತಿ ಲೇಡೀಸ್ ಕ್ಲಬ್ ನವರು ಗೃಹಿಣಿ ವಿದ್ಯಾರ್ಥಿಗಳಿಗೆ ಬೆಚ್ಚಗಿನ ಬ್ಲಾಕೆಟನ್ನು ನೀಡಿದರು. ಗೃಹಿಣಿ ತರಬೇತಿ ಕೇಂದ್ರದ ವಿದ್ಯಾರ್ಥಿನಿಯರು ಸ್ವಾತಂತ್ರ್ಯೋತ್ಸವ ಕುರಿತು ದೇಶಭಕ್ತಿ ಗೀತೆ ಮತ್ತು ನೃತ್ಯವನ್ನು ಮಾಡಿದರು. ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾದ ಕುಮಾರಿ ಪೂಜಾ ಕಿರೇಸೂರ ಸ್ವಾತಂತ್ರ್ಯದ ಕುರಿತು ಭಾಷಣ ಮಾಡಿದರು.

ಕುಮಾರ ಶಿವಾನಂದ ಬಡಿಗೇರ ದೇಶಭಕ್ತಿ ಗೀತೆ ಹಾಡಿದರು. ಪದವಿ ಪೂರ್ವ ಮಹಾವಿದ್ಯಾಲಯದ ಸ್ವಾತಿ ಹೂಗಾಡಿ ಹಾಗೂ ಸಂಗಡಿಗರು ದೇಶಭಕ್ತಿ ಗೀತೆ ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮವನ್ನು ಶ್ರೀ ಮೋಹನ ಕಳಸೂರ ನಿರೂಪಿಸಿದರು. ಶ್ರೀ ಎಂ.ಬಿ.ಉಳ್ಳಾಗಡ್ಡಿ ಅವರು ವಂದಿಸಿದರು. ಈ ಸಂದರ್ಭದಲ್ಲಿ ಪ್ರೊ ಎಂ.ಎಸ್.ಮುರುಗೋಡಮಠ ಗೃಹಿಣಿ ತರಬೇತಿ ಕೇಂದ್ರದ ಮುಖ್ಯಸ್ಥರಾದ ಸಿಸ್ಟರ್ ಜಯಶ್ರೀ,ಪದವಿ, ಪದವಿ ಪೂರ್ವ, ಪ್ಲೇ ಸ್ಕೂಲಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹಾಜರಿದ್ದರು.

ವರದಿ :-ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!