——————————————ನ್ಯಾಯಾಧೀಶರು ಶ್ರೀಮತಿ ಹುಂಡಿ ಮಂಜುಳಾ ಶಿವಪ್ಪ
ಲಿಂಗಸುಗೂರು : ದೇಶಾದ್ಯಂತ 79ನೇ ಸ್ವತಂತ್ರ ದಿನೋತ್ಸವ ಸಂಭ್ರಮದ ಆಚರಣೆಯಲ್ಲಿ ಇಂದು ಲಿಂಗಸುಗೂರು ಪಟ್ಟಣದ ತಾಲೂಕು ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿ 79ನೇ ಸ್ವತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿದ ಶ್ರೀಮತಿ ಹುಂಡಿ ಮಂಜುಳಾ ಶಿವಪ್ಪ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಧ್ವಜಾರೋಹಣ ನೆರವೇರಿಸಿದ ನಂತರ ಪೊಲೀಸರ ಗೌರವಂದನೆ ಸ್ವೀಕರಿಸಿ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ, ಸ್ವಾತಂತ್ರ ತಂದುಕೊಟ್ಟ ದೇಶಭಕ್ತರನ್ನು ಮರೆಯಬಾರದು, ಸ್ವಾತಂತ್ರ್ಯಕ್ಕಾಗಿ ಹೋರಾಟಗಾರರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಅದಕ್ಕಾಗಿ ಹೋರಾಟಗಾರರನ್ನು ಸ್ಮರಿಸ ಬೇಕು ಎಂದರು.
ಈ ಸಂದರ್ಭದಲ್ಲಿ ಸನ್ಮಾನ್ಯ ಶ್ರೀ ಗೌರವಾನ್ವಿತ ಅಂಬಣ್ಣ ಕೆ ಪ್ರಧಾನ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರು, ತಾಲೂಕು ವಕೀಲ ಸಂಘದ ಅಧ್ಯಕ್ಷರಾದ ಭೂಪನಗೌಡ ಪಾಟೀಲ್, ಆಶಿಕಮ್ಮದ್, ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ವೆಂಕೋಬ ಗುಡ್ಡನಾಳ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಮಧುಶ್ರೀ




