ಹುನಗುಂದ : ತಾಲ್ಲೂಕಿನ ಸೂಳೇಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮೃತ ಸರೋವರ ದಡದಲ್ಲಿ ಮಾಜಿ ಸೈನಿಕರಾದ ಷಣ್ಮುಖಪ್ಪ ಮಡಿವಾಳರ ಅವರ ಅಮೃತ ಹಸ್ತದಿಂದ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಜಲ ಸಂರಕ್ಷಣೆ ಹಾಗೂ ಹವಾಮಾನ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧನಕರ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಗಣ್ಣ ಕಳ್ಳೋಳ್ಳಿ , ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಸದಸ್ಯರಾದ ಜಗದೀಶ್ ರಗಟಿ, ಜಹಂಗೀರ್ ಜಾಗಿರದಾರ್, ಮಹಾಂತಯ್ಯ ನಂಜಯ್ಯನಮಠ, ಬಿಲ್ ಕಲೆಕ್ಟರ್ ಯಲ್ಲಪ್ಪ ಕೋರಿ, ಡಿಇಓ ರಾಹುಲ್ ರಾಠೋಡ, ಶಿಕ್ಷಕರಾದ ವಿರಯ್ಯ ಕಂಬಾಳಿಮಠ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




