————————————————————–ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್

ಎಜಬಾಸ್ಟನ್ (ಬರ್ಮಿಂಗ್ ಹ್ಯಾಂ): ನಾಯಕ ಶುಭಮಾನ್ ಗಿಲ್ ಅವರ ಆಕರ್ಷಕ ಶತಕ ಹಾಗೂ ಯಶಸ್ವಿ ಜೈಸ್ವಾಲ್ ಅವರ 87 ರನ್ ಗಳ ಸುಂದರ ಬ್ಯಾಟಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ 5 ವಿಕೆಟ್ ಗೆ 310 ರನ್ ಗಳಿಸಿತ್ತು.
ಮೊದಲ ದಿನದಾಟ ಮುಗಿದಾಗ ನಾಯಕ ಶುಭಮಾನ್ ಗಿಲ್ 216 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ 114 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ರವೀಂದ್ರ ಜಡೆಜಾ 67 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 41 ರನ್ ಗಳಿಸಿ ಕ್ರೀಸ್ ಬಳಿ ಇದ್ದರು.




