ಲಾಡ್ಸ್ (ಲಂಡನ್): ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ.
ಕ್ರಿಕೆಟ್ ಕಾಶಿ ಖ್ಯಾತಿಯ ಐತಿಹಾಸಿಕ ಮೈದಾನದಲ್ಲಿ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಮುಗಿದಾಗ ಭಾರತ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಗೆ 58 ರನ್ ಗಳಿಸಿದ್ದು, ಉಳಿದ 6 ವಿಕೆಟ್ ಗಳಿಂದ ಗೆಲ್ಲಲು ಇನ್ನು 135 ರನ್ ಗಳನ್ನು ಗಳಿಸಬೇಕಿದೆ. ದಿನದಾಟ ಮುಗಿದಾಗ ಕೆ.ಎಲ್. ರಾಹುಲ್ 33 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು.
ಇಂಗ್ಲೆಂಡ್ ತಂಡ ತನ್ನ ದ್ವಿತೀಯ ಸರದಿಯಲ್ಲಿ 192 ರನ್ ಗೆ ಆಲೌಟಾಗಿದ್ದರಿಂದ ಭಾರತಕ್ಕೆ 193 ರನ್ ಗಳ ಗೆಲುವಿನ ಸಿಕ್ಕಿತು. ಭಾರತ ತಂಡದ ಬೌಲರುಗಳು ಇಂಗ್ಲೆಂಡ್ ನ ದ್ವಿತೀಯ ಸರದಿಯಲ್ಲಿ ಉತ್ತಮ ಬೌಲಿಂಗ್ ನಿರ್ವಹಿಸಿದ್ದರಿಂದ ಭಾರತ ತಂಡಕ್ಕೆ ಸುಲಭ ಗುರಿ ಸಿಕ್ಕಿತ್ತು. ಆದರೆ ದ್ವಿತೀಯ ಸರದಿಯಲ್ಲಿ ಭಾರತ ತಂಡ ಯಶಸ್ವಿ ಜೈಸ್ವಾಲ್, ಕರುಣ್ ನಯ್ಯರ, ನಾಯಕ ಶುಭಮಾನ್ ಗಿಲ್ ಹಾಗೂ ರಾತ್ರಿ ಕಾವಲುಗಾರ ಆಕಾಶ ದೀಪ್ ಅವರ ವಿಕೆಟ್ ಗಳನ್ನು ಬೇಗನೆ ಒಪ್ಪಿಸಿದ್ದರಿಂದ ಪಂದ್ಯ ರೋಚಕ ಘಟ್ಟ ತಲುಪುವಂತಾಗಿದೆ. ಆದಾಗ್ಯೂ ಪಂದ್ಯ ಗೆಲ್ಲಲು ಈಗ ಭಾರತವೇ ಪೆವರಿಟ್ ಎನಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಸ್ಕೋರ್ ವಿವರ:
ಭಾರತ ಮೊದಲ ಇನ್ನಿಂಗ್ಸ್ 387
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 387
ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್ 192 ( ವಾಷಿಂಗ್ಟನ್ ಸುಂದರ 22 ಕ್ಕೆ 4)
ಭಾರತ ದ್ವಿತೀಯ ಇನ್ನಿಂಗ್ಸ್ 4 ವಿಕೆಟ್ ಗೆ 58




