ಹೆಡ್ಡಿಂಗ್ಲೆ ( ಇಂಗ್ಲೆಂಡ್): ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ನಾಳೆ ಇಲ್ಲಿ ಆರಂಭವಾಗಲಿದ್ದು, ಇಂಗ್ಲೆಂಡ್ ತಂಡವನ್ನು ಬೆನ್ ಸ್ಟೋಕ್ಸ್ ಮುನ್ನಡೆಸುವರು.
ಭಾರತ ತಂಡವು ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಗೈರು ಹಾಜರಿಯಲ್ಲಿ (ನಿವೃತ್ತಿ) ಬಳಿಕ ಕಣಕ್ಕೆ ಇಳಿಯಲಿದ್ದು, ಯುವ ಬ್ಯಾಟ್ಸಮನ್ ಶುಭಮಾನ್ ಗಿಲ್ ತಂಡದ ನಾಯಕತ್ವ ವಹಿಸಿಕೊಳ್ಳುವರು.
ಇಂಗ್ಲೆಂಡ್ ತಂಡ ತನ್ನ ಸದಸ್ಯರ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದು, ಭಾರತ ತಂಡ ಪಂದ್ಯಕ್ಕೆ ಇಳಿಯುವ ಮುನ್ನವೇ ತನ್ನ ಹನ್ನೊಂದರ ಬಳಗವನ್ನು ಪ್ರಕಟಿಸಲಿದೆ. ಭಾರತ ತಂಡದಲ್ಲಿ ಕನ್ನಡಿಗರಾದ ಕೆ.ಎಲ್. ರಾಹುಲ್, ಕರುಣ್ ನಯ್ಯರ ಹಾಗೂ ಪ್ರಸಿದ್ದ ಕೃಷ್ಣ ಮೂವರು ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.




