ಲಂಡನ್: ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆದಿರುವ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಇನ್ನೇನೂ ಇಂಗ್ಲೆಂಡ್ ಪರವಾಗಿ ವಾಲೀತು ಎನ್ನುವಷ್ಟರಲ್ಲಿಯೇ ಬೇಗ ಬೇಗ ಮೂರು ವಿಕೆಟ್ ಪಡೆದ ಭಾರತ ತಂಡದ ಬೌಲರುಗಳು ಟೆಸ್ಟ್ ಪಂದ್ಯದಲ್ಲಿ ಇನ್ನು ಕುತೂಹಲ ಉಳಿಯುವಂತೆ ಮಾಡಿದ್ದಾರೆ.
ಇಲ್ಲಿನ ಕೆನಿಂಗ್ಟನ್ ಓವೆಲ್ ಮೈದಾನದಲ್ಲಿ ನಾಲ್ಕನೇ ದಿನದಾಟ ಮುಗಿದಾಗ ಇಂಗ್ಲೆಂಡ್ 6 ವಿಕೆಟ್ ಗೆ 339 ರನ್ ಗಳಿಸಿದ್ದು, ಉಳಿದ ನಾಲ್ಕು ವಿಕೆಟ್ ಗಳಿಂದ ಪಂದ್ಯ ಗೆಲ್ಲಲು ಇನ್ನು 35 ರನ್ ಗಳಿಸಬೇಕಿದೆ. ಭಾರತ ಪಂದ್ಯ ಗೆಲ್ಲಲು 35 ರನ್ ಒಳಗಡೆ ಇಂಗ್ಲೆಂಡ್ ನ ನಾಲ್ಕು ವಿಕೆಟ್ ಪಡೆಯಬೇಕಿದೆ. ಹೀಗಾಗಿ ಪಂದ್ಯ ಇನ್ನು ರೋಚಕತೆ ಕಾಯ್ದುಕೊಂಡಿದ್ದು, ಕೊನೆಯ ದಿನದಾಟ ಕುತೂಹಲ ಕೆರಳಿಸಿದೆ.
ಇಂಗ್ಲೆಂಡ್ ನಾಲ್ಕನೇ ದಿನದಾಟ ಕೊನೆಗೆ 38 ರನ್ ಗಳ ಅಂತರದಲ್ಲಿ ಬೇಗ 2 ವಿಕೆಟ್ ಕಳೆದುಕೊಂಡಿತು. ಭಾರತದ ಪರವಾಗಿ ಪ್ರಸಿದ್ದ ಕೃಷ್ಣ 109 ರನ್ ನೀಡಿ 3 ವಿಕೆಟ್ ಪಡೆದರು.




