ದುಬೈ: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ನಾಳೆ ಇಲ್ಲಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯ ನಡೆಯಲಿದೆ. ಫೈನಲ್ ಗೂ ಮುನ್ನ ಎರಡೂ ತಂಡಗಳ ಬಲಾಬಲ, ನೆಟ್ ಅಭ್ಯಾಸ, ಸೋಲು, ಗೆಲುವಿನ ಲೆಕ್ಕಾಚಾರ. ಇವೆಲ್ಲ ಸಂಗತಿಗಳು ಮಾಮೂಲಿ. ಅಷ್ಟಕ್ಕೂ ಭಾರತ ತಂಡವೇ ಫೆವರಿಟ್ ಎಂದು ಎಲ್ಲರಿಗೂ ಗೊತ್ತು. ನ್ಯೂಜಿಲೆಂಟ್ ಕೂಡ ಸಮತೋಲನ ತಂಡವಾಗಿದ್ದು, ಕ್ರಿಕೆಟ್ನಲ್ಲಿ ಏನನ್ನೂ ಹೇಳಲು ಬಾರದು.
ಮೇಲಿನ ಎಲ್ಲ ಸಂತಿಗಳು ಮಾಮೂಲು. ಆದರೆ ಈಗ ಗಮನಿಸಬೇಕಾದ ಮಹತ್ವದ ಅಂಶ ಎಂದರೆ, ಚಾಂಪಿಯನ್ಸ್ ಟ್ರೋಫಿಯನ್ನು ಸೂಕ್ಷ್ಮವಾಗಿ ನೋಡುತ್ತಿರುವ ಎಲ್ಲರಿಗೂ ಗೊತ್ತಾಗುವ ವಿಷಯ ೇನೆಂದರೆ ವಿಶ್ವ ಕ್ರಿಕೆಟ್ ಗೆ ಈಗ ಭಾರತವೇ ಶ್ರೇಷ್ಠ ಎಂಬುದು.
ಭಾರದಲ್ಲಿರುವ ಕ್ರಿಕೆಟ್ ಮಾರ್ಕೆಟಿಂಗ್ ಬೇರೆ ಯಾವ ಕ್ರಿಕೆಟ್ ಆಡುವ ರಾಷ್ಟ್ರಗಳಲ್ಲೂ ಇಲ್ಲ. ಹೀಗಾಗಿ ವಿಶ್ವ ಕ್ರಿಕೆಟ್ ಸಂಸ್ಥೆ( ಐಸಿಸಿ) ಎಂದರೆ ಭಾರತ ಎನ್ನುವಂತಾಗಿದೆ. ಬಲಾಢ್ಯ ಭಾರತದ ಕ್ರಿಕೆಟ್ ಮಾರ್ಕೆಟಿಂಗ್ ಮುಂದೆ ಐಸಿಸಿ ಸೊರಗಿ ಹೋಗಿದೆ. ಹೀಗಾಗಿ ಭಾರತ ಪಾಕ್ ನೆಲ್ಲದಲ್ಲಿ ಆಡುವುದಿಲ್ಲ ಎಂದಾಗ ಐಸಿಸಿ ಅದಕ್ಕೆ ಸಮ್ಮತಿಸಿ ದುಬೈನಲ್ಲಿ ಭಾರತದ ಎಲ್ಲ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಿತು. ಹೀಗಾಗಿ ಭಾರತ ತಂಡ ಫೈನಲ್ ಸೇರಿ ತನ್ನೆಲ್ಲ ಪಂದ್ಯಗಳನ್ನು ಒಂದೇ ಮೈದಾನದಲ್ಲಿ ಆಡಲು ಸಾಧ್ಯವಾಗಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದೇ ಹೇಳಬೇಕು. ಎಲ್ಲ ತಂಡಗಳು ಎಲ್ಲ ಮೈದಾನಗಳಲ್ಲಿ ಆಡಿದರೆ ಭಾರತ ಮಾತ್ರ ದುಬೈನಲ್ಲೇ ಎಲ್ಲ ಪಂದ್ಯಗಳನ್ನು ಆಡಿದ್ದು, ಈ ಪಂದ್ಯಾವಳಿಯ ಒಂದು ವೈಶಿಷ್ಠ್ಯ.




