———————————————————————-ವಿಶ್ವಕಪ್ ಟ್ವೆಂಟಿ-೨೦: ಫೈನಲ್ ಇಂದು
ಅಹ್ಮದಾಬಾದ್: ಅತ್ಯುತ್ಸಾಹದಲ್ಲಿರುವ ಭಾರತ ಕ್ರಿಕೆಟ್ ತಂಡವು ಐಸಿಸಿ ಪುರುಷರ ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಇಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಂಜೆ ೭ ಕ್ಕೆ ಪಂದ್ಯ ಆರಂಭವಾಗಲಿದೆ. ಸರ್ಯ ಕುಮಾರ್ ನಾಯಕತ್ವದ ಭಾರತದ ಪಡೆ ಫೈನಲ್ ಪಂದ್ಯ ಗೆದ್ದು ಪ್ರಶಸ್ತಿ ಟ್ರೋಫಿ ಎತ್ತಿ ಹಿಡಿಯುವ ನೆಚ್ಚಿನ ತಂಡ ಎನಿಸಿದೆ.
ನ್ಯೂಜಿಲೆಂಡ್ ತಂಡವು ಕೂಡ ಕಡಿಮೆ ಏನಿಲ್ಲ. ಆ ತಂಡವು ಪಂದ್ಯಾವಳಿಯಲ್ಲಿ ಆಡಿರುವ ರೀತಿ ಹಾಗೂ ಸೆಮಿ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿರುವ ಆಟ ನೋಡಿದರೆ ಆ ತಂಡವನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ.
ಈ ಪಂದ್ಯದಲ್ಲಿಯೂ ಕೂಡ ದೊಡ್ಡ ಮೊತ್ತದ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಏಕೆಂದರೆ ಉಭಯ ತಂಡಗಳಲ್ಲೂ ಅಪಾರ ಪ್ರತಿಭಾವಂತ ಬ್ಯಾಟುಗಾರರು ಇದ್ದಾರೆ.
ಸಂಭಾವ್ಯ ತಂಡಗಳು:
ಭಾರತ: ಸರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ ರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ತಿಲಕ್ ರ್ಮಾ, ಶಿವಂ ದುಬೈ, ಹರ್ಧಿಕ ಪಾಂಡ್ಯಾ, ಅಕ್ಷರ ಪಟೇಲ್, ಜಸ್ಪಿçÃತ್ ಬೂಮ್ರಾ, ರ್ಷದೀಪ್ ಸಿಂಗ್, ವರುಣ್ ಚಕ್ರರ್ತಿ.
ನ್ಯೂಜಿಲೆಂಡ್: ಟಿಮ್ ಶರ್ಟ್, ಫಿನ್ ಅಲೆನ್, ರಚಿನ್ ರವೀಂದ್ರ, ಗ್ಲೇನ್ ಫಿಲಿಪ್ಸ್, ಮರ್ಕ್ ಚಾಪಮನ್, ಡರೇಲ್ ಮಿಚೆಲ್, ಜೇಮ್ಸ್ ನಿಶಾಮ್, ಮಿಚೆಲ್ ಸ್ಯಾಂಟ್ನರ್, ಕೊಲೆ ಮೆಕ್ನೋಯ್, ಮ್ಯಾಟ್ ಹೆನ್ರಿ, ಲೂಕಿ ಫರ್ಗೂಸನ್.




