ರಜೌರಿ : ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಉತ್ತುಂಗದಲ್ಲಿದೆ. ನಿನ್ನೆ ಪಾಕಿಸ್ತಾನ ಸುಖಾ ಸುಮ್ಮನೇ ದಾಳಿ ಮಾಡಿ ಭಾರತವನ್ನು ಕೆಣಕಿತ್ತು.
ಇದೀಗ ಭಾರತೀಯ ಸೇನೆ ಆಪರೇಷನ್ ಸಿಂಧೂರ್ 2.0 ಆರಂಭಿಸಿದೆ. ಪಾಕಿಸ್ತಾನದ ಸೇನಾ ಪೋಸ್ಟ್ಗಳನ್ನು ಹೊಡೆದು ಹಾಕುತ್ತಿದೆ.
ನಿನ್ನೆ ಶುರುವಾದ ಭಾರತೀಯ ಸೇನೆಯ ಅಬ್ಬರ ಇವತ್ತೂ ಕೂಡಾ ಮುಂದುವರೆದಿದೆ. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕಾರ್ಯಾಚರಣೆ ನಡೆಸಿರುವ ಭಾರತೀಯ ಪಡೆಗಳು, ಜಮ್ಮುವಿನ ರಜೌರಿ ಸೆಕ್ಟರ್‌ನಲ್ಲಿದ್ದ ಉಗ್ರರ ನೆಲೆ ಧ್ವಂಸ ಮಾಡಿವೆ. ಪಾಕಿಸ್ತಾನದ ಎರಡು ಸೇನಾ ನೆಲೆಗಳನ್ನು ಹೊಡೆದುಹಾಕಿವೆ. ಭಾರತೀಯ ಯೋಧರ ಮಾರಕ ದಾಳಿಗೆ ಉತ್ತರಿಸಲಾಗದೇ ಪಾಕಿಸ್ತಾನಿ ಯೋಧರು ಪಲಾಯನಗೈದಿದ್ದಾರೆ.
ನಿನ್ನೆ ರಾತ್ರಿ ಪಾಕಿಸ್ತಾನಿ ಪಡೆಗಳು ರಜೌರಿಯ ಜನವಸತಿ ಪ್ರದೇಶದ ಮೇಲೆ ದಾಳಿ ಮಾಡಲು ಯತ್ನಿಸಿದ್ದವು. ಆದ್ದರಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗಿದೆ.
ಜನರನ್ನು ಸ್ಥಳಾಂತರಿಸಿದ ಬಳಿಕ ಭಾರತೀಯ ಯೋಧರು ಭೀಕರ ದಾಳಿ ನಡೆಸಿವೆ. ನಿನ್ನೆ ಪಾಕಿಸ್ತಾನ ಯಾವ ಪ್ರದೇಶದಿಂದ ಗುಂಡಿನ ಮಳೆಗರೆದಿತ್ತೋ, ಯಾವ ಪ್ರದೇಶದಿಂದ ಡ್ರೋನ್ಗಳನ್ನು ಹಾರಿಸಿತ್ತೋ ಅದೇ ಸೇನಾ ಪೋಸ್ಟ್ಗಳನ್ನು ಭಾರತ ಹೊಡೆದುಹಾಕಿದೆ




