ಮೊಂಗಕಾಕ್: ಹಾಂಗ್ ಕಾಂಗ್ ಸೂಪರ್ ಸಿಕ್ಸಸ್ ಕ್ರಿಕೆಟ್ ಪಂದ್ಯಾವಳಿಯ ‘ಸಿ’ ಗುಂಪಿನ ಪಂದ್ಯದಲ್ಲಿ ಇಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಣಸಲಿವೆ.
ಇಲ್ಲಿನ ಮಿಷನ್ ರೋಡ್ ಮೈದಾನದಲ್ಲಿ ಪಂದ್ಯ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. ಭಾರತ ತಂಡದಲ್ಲಿ ಭರತ್ ಚಿಪ್ಲಿ, ರಾಬಿನ್ ಉತ್ತಪ್ಪ, ದಿನೇಶ್ ಕಾರ್ತಿಕ್ ( ವಿಕೆಟ್ ಕೀಪರ್) ಪ್ರಿಯಾಂಕ ಪಾಂಚಾಲ್, ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮಿಥುನ್, ಶಹಬಾಜ್ ನದೀಮ್ ಸ್ಥಾನ ಪಡೆದಿದ್ದಾರೆ.
ಪಾಕಿಸ್ತಾನ ತಂಡದಲ್ಲಿ ಅಬ್ದುಲ್ ಸಾಮದ್, ಖವಾಜ್ ನಫಾಯಾ, ಸಾದ್ ಮಸೂದ್, ಅಬ್ಬಾಸ್ ಅಫ್ರಿದಿ, ಮಾಜ್ ಸದಾಖತ್, ಮೊಹ್ಮದ್ ಶೆಹಜಾದ್, ಶಾಹೀದ್ ಅಜೀಜ್ ಇದ್ದಾರೆ.




