ಬೆಂಗಳೂರು : ಸರ್ವ ಜನಾಂಗವನ್ನು ಸಮ ದೃಷ್ಟಿಯಿಂದ ನೋಡುವ ಸಂವಿಧಾನವನ್ನು ಡಾ.ಬಾಬಾಹಾಹೇಬ ಅಂಬೇಡ್ಕರ್ ಅವರು ರಚಿಸಿ ಕೊಟ್ಟರು ಜೊತೆಗೆ ನಮ್ಮ ಕತ್ಯವ್ಯ ನಮಗೆ ಸೂಚಿಸಿದರು. ಅವರ ಆದರ್ಶಗಳ ಪಾಲನೆ ಅತ್ಯವಶ್ಯ ಅದೇ ರೀತಿ ಬಾಬು ಜಗಜೀವನರಾಮ್ ಅವರು ಹೊಂದಿದ ಸಂಸ್ಕೃತ ಪಾಂಡಿತ್ಯ ಮೆಚ್ಚುವಂತದ್ದು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು.
ಅವರು ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿಯಲ್ಲಿ ಅಹಿಂದ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ ಡಾ. ಬಿ.ಆರ್ ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ 118ನೇ ಜಯಂತಿ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಸರ್ಕಾರಿ ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಸ್ ಜಡಗಿ, ಕಾರ್ಯಾಧ್ಯಕ್ಷ ಕರುಣ ಶೀಲ ಮೌರ್ಯ, ಗೌರವಾಧ್ಯಕ್ಷ ಟಿ.ತಿಮ್ಮಣ್ಣ, ಡಾ. ಬಿರಾದಾರ್, ಮಂಜುನಾಥ್ ಟ್ರಾವೆಲ್ಸ್, ವಿ. ನಾಗರಾಜ್, ಕೇಶವಮೂರ್ತಿ, ಹರೀಶ್ ಗೌಡ್ರು, ಹೆಗ್ಗನಹಳ್ಳಿ ಡಿಎಸ್ಎಸ್ ಮೂರ್ತಿ, ಇವರೆಲ್ಲರು ಡಾ. ಅಂಬೇಡ್ಕರ್ ಅವರ ರಚಿಸಿದ ಸಂವಿಧಾನ ಕುರಿತು ಮಾತನಾಡಿದರು.
ಅಹಿಂದ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ ವೈ ಜಿ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು.
ಖ್ಯಾತ ಜಾನಪದ ಕಲಾವಿದ ಕುಣಿಗಲ್ ರಾಮಚಂದ್ರ ಸ್ವಾಗತ, ನಿರೂಪಣೆ ಮತ್ತು ಮನರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಭೀಮ ಪುತ್ರಿ ಬ್ರಿಗೇಡ್ ಸಂಸ್ಥಾಪಕಿ ರಾಜ್ಯಾಧ್ಯಕ್ಷೆ ರೇವತಿ ರಾಜ್, ರಾಜಗೋಪಾಲನಗರ ವಾರ್ಡಿನ ಬಿಜೆಪಿ ಮುಖಂಡ ದಿನೇಶ್, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ನಾಗರಾಜ್, ಶ್ರೀಕಾಂತ್, ಕಾಂಗ್ರೆಸ್ ಮಹಿಳಾ ಮುಖ್ಯಸ್ಥೆ ಹೇಮಾ ರಾಜೇಂದ್ರ, ರಮಾಬಾಯಿ ಸಂಸ್ಥಾಪಕಿ ರಾಜ್ಯಾಧ್ಯಕ್ಷೆ ಗಿರಿಜಾ, ಅಹಿಂದ ರಕ್ಷಣಾ ವೇದಿಕೆ ರಾಜ್ಯ ಸಮಿತಿ ,ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಸ್ಥಳೀಯ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್