ಎಜಬಾಸ್ಟನ್ (ಬರ್ಮಿಂಗ್ ಹ್ಯಾಂ): ಭಾರತ ಕ್ರಿಕೆಟ್ ತಂಡದ ಬೃಹತ್ ಮೊತ್ತಕ್ಕೆ (587) ಉತ್ತರವಾಗಿ ಬ್ಯಾಟ್ ಬೀಸುತ್ತಿರುವ ಇಂಗ್ಲೆಂಡ್ ತಂಡವು ಮೂರನೇ ದಿನದ ಒಂದು ಘಂಟೆಯ ನಂತರ 5 ವಿಕೆಟ್ ಗೆ 160 ರನ್ ಗಳಿಸಿದ್ದು, ಭಾರತ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ದೊಡ್ಡ ಮುನ್ನಡೆ ಸಾಧಿಸುವ ಸಾಧ್ಯತೆ ಇದೆ.
ವಿಕೆಟ್ ಕೀಪರ್ ಜೆಮ್ಮಿ ಸ್ಮಿತ್ 57 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ಇನ್ನೊಂದು ತುದಿಯಲ್ಲಿ ಹರ್ರಿ ಬ್ರೋಕ್ 58 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಭಾರತದ ಪರವಾಗಿ ಮೊಹ್ಮದ್ ಸಿರಾಜ್ 49 ಕ್ಕೆ 3 ಹಾಗೂ ಆಕಾಶ್ ದೀಪ್ 59 ಕ್ಕೆ 2 ವಿಕೆಟ್ ಪಡೆದರು.




