ಕ್ರಿಕೆಟ್: ಕಿರಿಯರ ಏಶಿಯಾ ಕಪ್
ದುಬೈ: ಕಿರಿಯರ ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಫೈನಲ್ ವರೆಗೆ ಸೋಲು ಕಾಣದೇ ಗೆಲುವಿನ ಓಟದಲ್ಲಿದ್ದ ಭಾರತ ೧೯ ರ್ಷದೊಳಗಿನವರ ತಂಡ ಇಂದು ಪಾಕ್ ವಿರುದ್ಧದ ಫೈನಲ್ ಪಂದ್ಯದಲ್ಲಿ ೧೯೧ ರನ್ ಗಳಿಂದ ಸೋಲುವ ಮೂಲಕ ನಿರಾಶೆ ಅನುಭವಿಸಿತು.
ಐಸಿಸಿ ಆಕಾಡೆಮಿ ಮೈದಾನದಲ್ಲಿ ನಡೆದ ಫೈನಲ್ನಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ ೫೦ ಓವರುಗಳಲ್ಲಿ ೮ ವಿಕೆಟ್ ಗೆ ೩೪೭ ರನ್ ಗಳ ವಿಶಾಲ ಮೊತ್ತ ದಾಖಲಿಸಿತ್ತು. ಪ್ರತಿಯಾಗಿ ಆಡಿದ ಭಾರತ ೨೬.೨ ಓವರುಗಳಲ್ಲಿ ೧೫೧ ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು.




