ಹಲ್ಯಾಳ : ಭಾರತವು ಪಾಕಿಸ್ತಾನವನ್ನು ಬಗ್ಗು ಬಡಿಸಲು ಚಿಕ್ಕ ಮಕ್ಕಳು ಆಂಜನೇಯನಿಗೆ ವಿಶೇಷ ಪೂಜೆ ಅಭಿಷೇಕ್ ಮಾಡಿಸಿ ದೇವರಲ್ಲಿ ಪ್ರಾರ್ಥಿಸಿದರು.
ಪಹಲ್ಗಾಮಾ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆಯುವ ವೇಳೆ ಭಾರತೀಯ ಸೈನಿಕರು ಜಯಭೇರಿ ಸಾಧಿಸಬೇಕು ಈ ವೇಳೆ ನಮ್ಮ ಸೈನಿಕರು ಸುರಕ್ಷಿತವಾಗಿ ಬರಬೇಕು ಎಂದು ಗ್ರಾಮದ ಆಂಜನೇಯನಿಗೆ ವಿಶೇಷ ಪೂಜೆ ಮತ್ತು ಅಭಿಷೇಕವನ್ನು ಎಲ್ಲ ಚಿಕ್ಕಮಕ್ಕಳು ಯುವಕರು ಆಂಜನೇಯನಿಗೆ ಕೈ ಮುಗಿದು ಪ್ರಾರ್ಥಿಸಿದರು.
ನಾವು ಸೈನಿಕರು ಇರದೇ ಇದ್ದರೂ ಪರೋಕ್ಷವಾಗಿ ನಮ್ಮ ಯೋಧರಿಗೆ ಯುದ್ಧದಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿಸಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಶತ್ರುಗಳನ್ನು ಸದೆಬಡೆಯಲಿ ಹೇಗೆಂದರೆ ಹಿಂದೆ ಒಂದನೇ ಬಾಜಿರಾವ್ ಮೊಗಲರ ಕುರಿತಾಗಿ ಗಿಡದ ರೆಂಬೆ ಕೊಂಬೆ ಕತ್ತರಿಸುವ ಬದಲಾಗಿ ಬುಡಾನೇ ಕತ್ತರಿಸಿದರೆ ರೆಂಬೆಕೊಂಬೆಗಳು ತಾವಾಗಿಯೇ ಉದುರಿ ಬೀಳುತ್ತವೆ. ಪಾಪಿ ಪಾಕಿಸ್ತಾನ ಗೆ ಇದೆ ಶಿಕ್ಷೆ ನೀಡಬೇಕು ಎಂದು 10ನೇ ತರಗತಿ ವಿದ್ಯಾರ್ಥಿ ಆಕಾಶ ಬಿರಾದರ ತನ್ನ ದೇಶ ಪ್ರೇಮದ ಮಾತನ್ನು ಹೇಳಿದನು.
ಈ ವೇಳೆ ಸೋಮಶೇಖರ ಜಾಕಾತಿಮಠ, ರಾಮು ಗುರವ,ರಾವಸಾಬ ಪಾಟೀಲ, ಸುರೇಶ್ ಜಾಧವ,ಅಜೀತ್ ಸಿಂಧೆ, ಗುರುಲಿಂಗ ಕೋಳಿ, ಗುಂಡು ಅಂಬಿ, ಮಾಂತೇಶ ಕೋಳಿ, ಮಹೇಶ್ ಟೋಕರಿಕೋಳಿ,ಮುತ್ತಪ್ಪ ನೆಸೂರ್ ಇತರರಿದ್ದರು.




