—-ಮಹಿಳಾ ವಿಶ್ವಕಪ್ ಕ್ರಿಕೆಟ್ : ಶಫಾಲಿ ವರ್ಮಾ ಪಂದ್ಯ ಶ್ರೇಷ್ಠ, ದೀಪ್ತಿ ಶರ್ಮಾ ಸರಣಿ ಶ್ರೇಷ್ಠ
ನವಿ ಮುಂಬೈ: ಭಾರತ ಮಹಿಳಾ ತಂಡವು ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಫೈನಲ್ ಪಂದ್ಯದಲ್ಲಿ 52 ರನ್ ಗಳಿಂದ ಮಣಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಇಲ್ಲಿನ ಡಿ.ಆರ್. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡವು 7 ವಿಕೆಟ್ ಗೆ 298 ರನ್ ಗಳಿಸಿತ್ತು. 299 ರನ್ ಗಳ ಗುರಿ ಹೊಂದಿದ್ದ ದಕ್ಷಿಣ ಆಫ್ರಿಕಾ ತಂಡವು 45.3 ಓವರುಗಳಲ್ಲಿ 246 ರನ್ ಗಳಿಗೆ ಆಲೌಟಾಗಿ 52 ರನ್ ಗಳಿಂದ ಸೋಲೊಪ್ಪಿಕೊಂಡಿತು.

ಸ್ಕೋರ್ ವಿವರ
ಭಾರತ 50 ಓವರುಗಳಲ್ಲಿ 7 ವಿಕೆಟ್ ಗೆ 298 ರನ್
ಶಫಾಲಿ ವರ್ಮಾ 87 ( 78 ಎಸೆತ, 7 ಬೌಂಡರಿ, 2 ಸಿಕ್ಸರ್)
ದೀಪ್ತಿ ಶರ್ಮಾ 58 ( 58 ಎಸೆತ, 3 ಬೌಂಡರಿ, 1 ಸಿಕ್ಸರ್)
ಸ್ಮೃತಿ ಮಂದಾನಾ 45 ( 58 ಎಸೆತ, 8 ಬೌಂಡರಿ), ರಿಚಾ ಘೋಷ್ 34 ( 24 ಎಸೆತ, 3 ಬೌಂಡರಿ, 2 ಸಿಕ್ಸರ್)

ದಕ್ಷಿಣ ಆಫ್ರಿಕಾ 45.3 ಓವರುಗಳಲ್ಲಿ 246
ಲವೂರಾ ವೊಲ್ವಾರ್ಡ 101 ( 98 ಎಸೆತ, 11 ಬೌಂಡರಿ, 1 ಸಿಕ್ಸರ್) ಅನೇರಿ ಡೆರಕ್ಸನ್ 35 ( 37 ಎಸೆತ, 1 ಬೌಂಡರಿ, 2 ಸಿಕ್ಸರ್)
ದೀಪ್ತಿ ಶರ್ಮಾ 39 ಕ್ಕೆ 5, ಶಫಾಲಿ ವರ್ಮಾ 36 ಕ್ಕೆ 2




