———————————-ಅಭಿಷೇಕ ಶರ್ಮಾ ಮತ್ತೇ ಮಿಂಚಿನ ಬ್ಯಾಟಿಂಗ್, ಪಂದ್ಯ ಶ್ರೇಷ್ಠ
ದುಬೈ: ನಿರೀಕ್ಷೆಯಂತೆ ಭಾರತ ಕ್ರಿಕೆಟ್ ತಂಡವು ಇಲ್ಲಿ ನಡೆದ ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಸೂಪರ್-4 ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 41 ರನ್ ಗಳಿಂದ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟಿತು.
ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ನಿಗದಿತ 20 ಓವರುಗಳಲ್ಲಿ 6 ವಿಕೆಟ್ ಗೆ 168 ರನ್ ಗಳಿಸಿತು. ಪ್ರತಿಯಾಗಿ ಆಡಿದ ಬಾಂಗ್ಲಾದೇಶ ತಂಡವು 19.3 ಓವರುಗಳಲ್ಲಿ 127 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಪರಾಭವಗೊಂಡಿತು.
ಮತ್ತೇ ಮಿಂಚಿದ ಅಭಿಷೇಕ ಶರ್ಮಾ: ಆರಂಭ ಆಟಗಾರ ಅಭಿಷೇಕ ಶರ್ಮಾ ಮತ್ತೇ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು ಆರಂಭದಲ್ಲೇ ತಂಡಕ್ಕೆ 10 ರನ್ ಗಳ ಸರಾಸರಿಯಲ್ಲಿ ರನ್ ತಂದರು. ಶುಭಮಾನ್ ಗಿಲ್ ಹಾಗೂ ಇವರ ಪಾಲುಗಾರಿಕೆ ಭಾರತಕ್ಕೆ ಚೇತನ ನೀಡಿತ್ತು. ಆದರೆ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಭಾರತದ ಇನ್ನಿಂಗ್ಸ್ 168 ಕ್ಕೆ ಸಮಾಧಾನ ಪಡುವಂತಾಯಿತು.
ಸ್ಕೋರ್ ವಿವರ
ಭಾರತ 20 ಓವರುಗಳಲ್ಲಿ 6 ವಿಕೆಟ್ ಗೆ 168
ಅಭಿಷೇಕ ಶರ್ಮಾ 75 ( 37 ಎಸೆತ, 6 ಬೌಂಡರಿ, 5 ಸಿಕ್ಸರ್), ಹಾರ್ಧಿಕ ಪಾಂಡ್ಯಾ 38 ( 29 ಎಸೆತ, 4 ಬೌಂಡರಿ, 1 ಸಿಕ್ಸರ್)
ಶುಭಮಾನ್ ಗಿಲ್ 29 ( 19 ಎಸೆತ, 2 ಬೌಂಡರಿ, 1 ಸಿಕ್ಸರ್) ರಿಷಾದ್ ಹುಸೇನ್ 27 ಕ್ಕೆ 2)
ಬಾಂಗ್ಲಾದೇಶ 19.3 ಓವರುಗಳಲ್ಲಿ 127
ಸೈಫ್ ಹಸನ್ 69 ( 51 ಎಸೆತ, 3 ಬೌಂಡರಿ, 5 ಸಿಕ್ಸರ್) ಕುಲದೀಪ್ ಯಾದವ್ 18 ಕ್ಕೆ 3, ಬೂಮ್ರಾ 18 ಕ್ಕೆ 2, ವರುಣ್ ಚರ್ಕವರ್ತಿ 29 ಕ್ಕೆ 2)
———————————————————–ಪಂದ್ಯ ಶ್ರೇಷ್ಠ: ಅಭಿಷೇಕ ಶರ್ಮಾ




