—————————————ಭಾರತ- ಆಸ್ಟ್ರೇಲಿಯಾ ಟ್ವೆಂಟಿ ಕ್ರಿಕೆಟ್ ಸರಣಿ
ಕ್ವಿನ್ಸಲೆಂಡ್: ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಕರಾರಾ ಓವೆಲ್ ಮೈದಾನದಲ್ಲಿ ನಡೆದ ನಾಲ್ಕನೇ ಟ್ವೆಂಟಿ-20 ಪಂದ್ಯವನ್ನು ಗೆಲ್ಲುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡವು ನಿಗದಿತ 20 ಓವರುಗಳಲ್ಲಿ 8 ವಿಕೆಟ್ ಗೆ 167 ರನ್ ಗಳಿಸಿತು. ಪ್ರತಿಯಾಗಿ ಆಡಿದ ಆಸ್ಟ್ರೇಲಿಯಾ ತಂಡವು 18,2 ಓವರುಗಳಲ್ಲಿ 119 ರನ್ ಗಳಿಗೆ ಆಲೌಟಾಯಿತು. ಭಾರತದ ಪರವಾಗಿ ಸರ್ವಾಂಗೀಣ ಆಟದಿಂದ ಗಮನ ಸೆಳೆದ ಅಕ್ಷರ ಪಟೇಲ್ ಬಿರುಸಿನ ಅಜೇಯ 21 ರನ್ ಗಳಿಸಿದರಲ್ಲದೇ ಬೌಲಿಂಗ್ ನಲ್ಲಿ ತಾವು ಮಾಡಿದ ನಾಲ್ಕು ಓವರುಗಳಲ್ಲಿ ಕೇವಲ 20 ರನ್ ನೀಡಿ ಎರಡು ವಿಕೆಟ್ ಕಿತ್ತು ಗೆಲುವಿನ ರೂವಾರಿಯಾದರು.
ಸ್ಕೋರ್ ವಿವರ
ಭಾರತ 20 ಓವರುಗಳಲ್ಲಿ 8 ವಿಕೆಟ್ ಗೆ 167
ಶುಭಮಾನ್ ಗಿಲ್ 46 ( 39 ಎಸೆತ, 4 ಬೌಂಡರಿ, 1 ಸಿಕ್ಸರ್)
ಅಭಿಷೇಕ ಶರ್ಮಾ 28 ( 21 ಎಸೆತ, 3 ಬೌಂಡರಿ, 1 ಸಿಕ್ಸರ್)
ಶಿವಂ ದುಬೈ 22 ( 18 ಎಸೆತ, 1 ಬೌಂಡರಿ, 1 ಸಿಕ್ಸರ್)
ಸೂರ್ಯ ಕುಮಾರ್ ಯಾದವ್ 20 ( 10 ಎಸೆತ, 2 ಸಿಕ್ಸರ್), ಅಕ್ಷರ ಪಟೇಲ್ 21 ( 11 ಎಸೆತ, 1 ಬೌಂಡರಿ, 1 ಸಿಕ್ಸರ್)
ನ್ಯಾಥನ್ ಎಲಿಸ್ 21 ಕ್ಕೆ 3, ಝಂಪಾ 45 ಕ್ಕೆ 3)
ಆಸ್ಟ್ರೇಲಿಯಾ 18.2 ಓವರುಗಳಲ್ಲಿ 119
ಮಿಚೆಲ್ ಮಾರ್ಷ 30 ( 24 ಎಸೆತ, 4 ಬೌಂಡರಿ)
ಮ್ಯಾಥ್ಯೂ ಶಾರ್ಟ್ 25 ( 19 ಎಸೆತ, 2 ಬೌಂಡರಿ, 2 ಸಿಕ್ಸರ್)
ಅಕ್ಷರ ಪಟೇಲ್ 20 ಕ್ಕೆ 2, ವಾಷಿಂಗ್ಟನ್ ಸುಂದರ್ 3 ಕ್ಕೆ 3, ಶಿವಂ ದುಬೈ 20 ಕ್ಕೆ 2)
ಪಂದ್ಯ ಶ್ರೇಷ್ಠ: ಅಕ್ಷರ ಪಟೇಲ್




