—————————————ಏಶಿಯಾ ಕಪ್ ಕ್ರಿಕೆಟ್: ಭಾರತ, ಲಂಕಾ ಪಂದ್ಯ ಟೈ
ದುಬೈ: ಭಾರತ ಕ್ರಿಕೆಟ್ ತಂಡವು ಇಲ್ಲಿ ನಡೆದಿರುವ ಏಶಿಯಾ ಕಪ್ ಪಂದ್ಯಾವಳಿಯ ಸೂಪರ್-4 ರ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಸೂಪರ್ ಓವರ್ ನಲ್ಲಿ ಸೋಲಿಸಿ ತನ್ನ ಗೆಲುವಿನ ಓಟವನ್ನು ಮುಂದುವರೆಸಿತು.
ಇಲ್ಲಿನ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಉಭಯ ತಂಡಗಳು ನಿಗದಿತ 20 ಓವರುಗಳ ಪಂದ್ಯವನ್ನು ಮುಗಿಸಿದಾಗ 202 ರನ್ ಗಳಿಸಿದವು. ಪಂದ್ಯ ಟೈ ಆಗಿದ್ದರಿಂದ ಪಂದ್ಯದ ವಿಜೇತರನ್ನು ನಿರ್ಧರಿಸಲು ಸೂಪರ್ ಓವರ್ ಗೆ ಮೋರೆ ಹೋಗಲಾಯಿತು. ಸೂಪರ್ ಓವರ್ ನಲ್ಲಿ ಗೆಲ್ಲಲು ಕೇವಲ 3 ರನ್ ಗಳನ್ನು ಗಳಿಸಬೇಕಿದ್ದ ಭಾರತ ಸುಲಭವಾಗಿ ಪಂದ್ಯ ಗೆದ್ದಿತು.
ಸ್ಕೋರ್ ವಿವರ
ಭಾರತ 20 ಓವರುಗಳಲ್ಲಿ 5 ವಿಕೆಟ್ ಗೆ 202
ಅಭಿಷೇಕ ಶರ್ಮಾ 61 ( 31 ಎಸೆತ, 8 ಬೌಂಡರಿ, 2 ಸಿಕ್ಸರ್), ತಿಲಕ್ ವರ್ಮಾ ಅಜೇಯ 49 ( 34 ಎಸೆತ, 4 ಬೌಂಡರಿ, 1 ಸಿಕ್ಸರ್), ಸ್ಯಾಮ್ಸನ್ 39 ( 23 ಎಸೆತ, 1 ಬೌಂಡರಿ, 3 ಸಿಕ್ಸರ್)
ಶ್ರೀಲಂಕಾ 20 ಓವರುಗಳಲ್ಲಿ 5 ವಿಕೆಟ್ ಗೆ 202
ಪಾತುಮ್ ನಿಶಾಂಕಾ 107 ( 58 ಎಸೆತ, 7 ಬೌಂಡರಿ, 6 ಸಿಕ್ಸರ್), ಕುಶಾಲ್ ಫೆರೆರಾ 58 ( 32 ಎಸೆತ, 8 ಬೌಂಡರಿ, 1 ಸಿಕ್ಸರ್)
ಸೂಪರ್ ಓವರ್ ನಲ್ಲಿ ಭಾರತಕ್ಕೆ ಗೆಲುವು
ಪಂದ್ಯ ಶ್ರೇಷ್ಠ: ಪಾತುಮ್ ನಿಶಾಂಕಾ




