———————————————–ಕ್ರಿಕೆಟ್: ಆಸ್ಟ್ರೇಲಿಯಾ ವಿರುದ್ಧದ ಟ್ವೆಂಟಿ-20 ಸರಣಿ
ಹೋಬಾರ್ಟ್: ಭಾರತ ಕ್ರಿಕೆಟ್ ತಂಡವು ಇಲ್ಲಿನ ಬೆಲರೀವ್ ಓವೆಲ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಟ್ವೆಂಟಿ-20 ಪಂದ್ಯವನ್ನು 5 ವಿಕೆಟ್ ಗಳಿಂದ ಗೆಲ್ಲುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-1 ರ ಸಮ ಬಲ ಸಾಧಿಸಿತು.

ಜಯ ಸಾಧಿಸಲು 187 ರನ್ ಗಳಿಸಬೇಕಿದ್ದ ಭಾರತ ತಂಡವು 18.3 ಓವರುಗಳಲ್ಲಿ 5 ವಿಕೆಟ್ ಗೆ 188 ರನ್ ಗಳಿಸಿ ಸುಲಭ ಜಯ ಪಡೆಯಿತು. ಇದಕ್ಕೆ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರುಗಳಲ್ಲಿ 6 ವಿಕೆಟ್ ಗೆ 186 ರನ್ ಗಳಿಸಿತ್ತು.
ಸ್ಕೋರ್ ವಿವರ
ಆಸ್ಟ್ರೇಲಿಯಾ 20 ಓವರುಗಳಲ್ಲಿ 6 ವಿಕೆಟ್ ಗೆ 186
ಟಿಮ್ ಡೆವಿಡ್ 74 ( 38 ಎಸೆತ, 8 ಬೌಂಡರಿ, 5 ಸಿಕ್ಸರ್)
ಸ್ಟೋನಿಸ್ 64 ( 39 ಎಸೆತ, 8 ಬೌಂಡರಿ, 2 ಸಿಕ್ಸರ್) ಅರ್ಷದೀಪ್ ಸಿಂಗ್ 35 ಕ್ಕೆ 3)
ವರುಣ್ ಚರ್ಕವರ್ತಿ 33 ಕ್ಕೆ 2,
ಭಾರತ 18.3 ಓವರುಗಳಲ್ಲಿ 5 ವಿಕೆಟ್ ಗೆ 188
ವಾಷಿಂಗ್ಟನ್ ಸುಂದರ್ ಅಜೇಯ 49 ( 23 ಎಸೆತ, 3 ಬೌಂಡರಿ, 4 ಸಿಕ್ಸರ್)
ತಿಲಕ್ ವರ್ಮಾ 29 ( 23 ಎಸೆತ, 1 ಬೌಂಡರಿ, 1 ಸಿಕ್ಸರ್), ಅಭಿಷೇಕ ಶರ್ಮಾ 25 ( 16 ಎಸೆತ, 2 ಬೌಂಡರಿ, 2 ಸಿಕ್ಸರ್)
ಜಿತೇಶ್ ಶರ್ಮಾ ಅಜೇಯ 22 ( 13 ಎಸೆತ, 3 ಬೌಂಡರಿ) ಅಕ್ಷರ ಪಟೇಲ್ 17 ( 12 ಎಸೆತ, 1 ಬೌಂಡರಿ)
ನ್ಯಾಥನ್ ಎಲಿಸ್ 36 ಕ್ಕೆ 3)
ಪಂದ್ಯ ಶ್ರೇಷ್ಠ: ಅರ್ಷದೀಪ್ ಸಿಂಗ್




