100 ಉಗ್ರರ ತಲೆ ಕಡಿದ ಭಾರತೀಯ ಸೇನೆ ಅಬ್ಬರಿಸಿದೆ, ಭಾರತೀಯರ ತಂಟೆಗೆ ಬಂದಿದ್ದ ಪಾಪಿ ಪಾಕಿಸ್ತಾನದ ಉಗ್ರ ರಾಕ್ಷಸರನ್ನು ಇದೀಗ ತುಂಡರಿಸಲಾಗಿದೆ. ಇಷ್ಟು ದಿನಗಳ ಕಾಲ ಒಂದು ಲೆಕ್ಕ ಈಗ ಒಂದು ಲೆಕ್ಕ ಅಂತಾ ಭಾರತೀಯ ಸೇನೆ ಮುಂದೆ ನುಗ್ಗುತ್ತಿದೆ. ಭಾರತದ ಸೇನೆ ದಾಳಿಯಲ್ಲಿ ಎಷ್ಟು ಜನ ಉಗ್ರರು ನೆಗೆದು ಬಿದ್ದು ಹೋಗಿದ್ದಾರೆ? ಅನ್ನೋ ಪ್ರಶ್ನೆ ಕಾಡುತ್ತಲೇ ಇತ್ತು, ಅದಕ್ಕೆ ಇದೀಗ ಅಧಿಕೃತ ಮಾಹಿತಿ ಸಿಕ್ಕಿದೆ.
ಏಪ್ರಿಲ್ 22 ಮಂಗಳವಾರ ಉಗ್ರರ ದಾಳಿಯಲ್ಲಿ 26 ಭಾರತೀಯರು ಬಲಿಯಾದ ಹಿನ್ನೆಲೆ ಭಾರತ ಸೇನೆ ಉಗ್ರರ ವಿರುದ್ಧ ರಿವೇಂಜ್ ತೆಗೆದುಕೊಂಡಿದೆ. ಈ ಕಾರಣಕ್ಕೆ ಪಾಪಿ ಪಾಕಿಸ್ತಾನ ಸೇನೆ ಕೂಡ ದಾಳಿಯನ್ನ ಆರಂಭ ಮಾಡಿದ್ದು, ಸರಿಯಾಗೇ ಏಟು ತಿನ್ನುತ್ತಿದೆ ಪಾಪಿ ಪಾಕಿಸ್ತಾನ. ಮೊದಲೇ ತಿನ್ನಲು ಅನ್ನವೇ ಇಲ್ಲದೆ ನರಳುತ್ತಿರುವ & ಮೈತುಂಬಾ ಸಾಲ ಮಾಡಿಕೊಂಡಿರುವ ಪಾಕಿಸ್ತಾನಕ್ಕೆ ಮರ್ಮಾಘಾತ ಎದುರಾಗಿದೆ. ಹೀಗಿದ್ದಾಗ ಭಾರತೀಯ ಸೇನಾ ದಾಳಿಯಲ್ಲಿ ಬಲಿಯಾದ ಉಗ್ರರ ಅಸಲಿ ಸಂಖ್ಯೆ ಇದೀಗ ಬಯಲಾಗಿದೆ.
100 ಉಗ್ರರ ತಲೆ ಉಡೀಸ್!
ಪಾಪಿ ಪಾಕಿಸ್ತಾನದ 24 ಸ್ಥಳಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿದ ನಂತರ ಕೇಂದ್ರ ಸರ್ಕಾರ ಇಂದು ಸರ್ವಪಕ್ಷ ಸಭೆಯನ್ನು ಕರೆದಿತ್ತು. ಈ ಸಭೆಯಲ್ಲಿ ಅಧಿಕೃತವಾಗಿ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ಆಪರೇಷನ್ ಸಿಂಧೂರ ಮೂಲಕ ಒಟ್ಟು 100 ಉಗ್ರರ ತಲೆಯನ್ನ ಉರುಳಿಸಿರುವ ಬಗ್ಗೆ ಲೆಕ್ಕ ಕೊಟ್ಟಿದೆ.
ಈ ಮೂಲಕ ಭಾರತದ ತಂಟೆಗೆ ಬಂದಿದ್ದ ಪಾಪಿಗಳ ಲೆಕ್ಕ ಚುಕ್ತಾ ಆಗಿರುವುದು ಪಕ್ಕಾ ಆಗಿದೆ. ಹಾಗಾದ್ರ ಪಾಪಿ ಪಾಕಿಸ್ತಾನದಲ್ಲಿ ಇನ್ನೂ ಏನೆಲ್ಲಾ ಲಾಸ್ ಆಗಿದೆ? ಸರ್ವಪಕ್ಷ ಸಭೆಯಲ್ಲಿ ಏನೆಲ್ಲಾ ಆಯ್ತು?




