ಚೇಲ್ಮಸಪಾರ್ಡ: ಇಲ್ಲಿನ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ವಯೋಮಿತಿಯ ಯುವ ಟೆಸ್ಟ್ ಪಂದ್ಯದಲ್ಲಿ ಭಾರತ ದ್ವಿತೀಯ ಸರದಿಯಲ್ಲಿ 1 ವಿಕೆಟ್ ಗೆ 51 ರನ್ ಗಳಿಸಿದ್ದು, ಪಂದ್ಯದಲ್ಲಿ ಒಟ್ಟಾರೆ 258 ರನ್ ಗಳ ಮುನ್ನಡೆ ಸಾಧಿಸಿದೆ.
ಎರಡನೇ ದಿನದಾಟ ಮುಗಿದಾಗ ಆಯುಷ್ ಮಾತ್ರೆ 24 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ವಿಹಾನ್ ಮಲ್ಹೋತ್ರಾ 6 ರನ್ ಗಳಿಸಿ ಕ್ರೀಸ್ ಬಳಿ ಇದ್ದರು. ವೈಭವ್ ಸೂರ್ಯವಂಶಿ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.




