————————————ಜೆಮ್ಮೀ ರೂಡ್ರಿಗ್ಸ್ ಅಜೇಯ ಶತಕ: ಕೌರ್ ಮಿಂಚಿನ ಬ್ಯಾಟಿಂಗ್
ನವಿ ಮುಂಬೈ: ಜೆಮ್ಮೀ ರೂಡ್ರಿಗ್ಸ್ ಅಜೇಯ, ಆಕರ್ಷಕ ಶತಕ ( 127) ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಶತಕ ವಂಚಿತ (89 ) ಸಾಹಸ ಮಯಿ ಇನ್ನಿಂಗ್ಸ್ ನಡುವೆ ಭಾರತ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ 5 ವಿಕೆಟ್ ಗಳಿಂದ ಜಯ ಸಾಧಿಸಿ ವಿಶ್ವಕಪ್ ಫೈನಲ್ ಪ್ರವೇಶಿಸಿತು.

ಡಾ. ಡಿ.ವೈ. ಪಾಟೀಲ್ ಸ್ಪೋಟ್ಸ್ ಆಕಾಡೆಮಿ ಮೈದಾನದಲ್ಲಿ ನಡೆದ ಸೆಮಿಫೈನಲ್ ನಲ್ಲಿ ಗೆಲ್ಲಲು ವಿಶಾಲ 339 ರನ್ ಗಳ ಗುರಿ ಹೊಂದಿದ್ದ ಭಾರತ ಮಹಿಳೆಯರ ತಂಡವು 48.3 ಓವರುಗಳಲ್ಲಿ 5 ವಿಕೆಟ್ ಗೆ 341 ರನ್ ಗಳಿಸಿ ಜಯಭೇರಿ ಬಾರಿಸಿತು.
ಸ್ಕೋರ್ ವಿವರ
ಆಸ್ಟ್ರೇಲಿಯಾ 50 ಓವರುಗಳಲ್ಲಿ 338
ಪೊಯೆಬೆ ಲಿಚಿಫಿಲ್ಡ್ 119 ( 93 ಎಸೆತ, 17 ಬೌಂಡರಿ, 3 ಸಿಕ್ಸರ್)
ಎಲ್ಸೆ ಪೆರ್ರಿ 77 ( 88 ಎಸೆತ, 6 ಬೌಂಡರಿ, 2 ಸಿಕ್ಸರ್)
ಆಸ್ಲೆ ಗಾರ್ಡನರ್ 63( 45 ಎಸೆತ, 4 ಬೌಂಡರಿ, 4 ಸಿಕ್ಸರ್)
ಶ್ರೀ ಚರಣಿ 49 ಕ್ಕೆ 2)
ಭಾರತ 48.3 ಓವರುಗಳಲ್ಲಿ 5 ವಿಕೆಟ್ ಗೆ 341
( ಜೆಮ್ಮೀ ರೂಡ್ರಿಗ್ಸ್ ಅಜೇಯು 127 ( 134 ಎಸೆತ, 14 ಬೌಂಡರಿ)
ಹರ್ಮನ್ ಪ್ರೀತ್ ಕೌರ್ 89 ( 88 ಎಸೆತ, 10 ಬೌಂಡರಿ, 2 ಸಿಕ್ಸರ್)




