ಮುಖಪುಟ ಚಿತ್ರ: ಸಾಂರ‍್ಭಿಕ ಚಿತ್ರ
ಇರಾನ್‌ನಲ್ಲಿ ತೀವ್ರ ಪ್ರತಿಭಟನೆಗಳು ಹಾಗೂ ಉದ್ವಿಗ್ನ ಪರಸ್ಥಿತಿ ಹಿನ್ನೆಲೆಯಲ್ಲಿ ಹಾಗೂ ಅಲ್ಲಿ ಇಂಟರನೆಟ್ ಸೇವೆ ಇಲ್ಲದ ಕಾರಣ ಆತಂಕಕ್ಕೆ ಒಳಗಾಗಿದ್ದ ಅಲ್ಲಿನ ಭಾರತದ ಪ್ರಜೆಗಳು ಎರಡು ವಾಣಿಜ್ಯ ವಿಮಾನ ಸೇವೆಗಳ ಮೂಳಕ ಭಾರತಕ್ಕೆ ಆಗಮಿಸಿದ್ದಾರೆ.
ಇರಾನ್‌ನಲ್ಲ ಹಿಂಸಾತ್ಮಕ ಪ್ರತಿಭಟನೆಗಳು ಹಾಗೂ ಉದ್ವಿಗ್ನ ಪರಿಸ್ಥಿತಿ ನರ‍್ಣಾಣವಾದ ಹಿನ್ನೆಲೆಯಲ್ಲಿ ಇರಾನ್‌ಗೆ ಪ್ರಯಾಣ ಮಾಡದಂತೆ ಭಾರತೀಯ ನಾಗರಿಕರಿಗೆ ಸೂಚನೆ ನೀಡಲಾಗಿತ್ತು. ಈಗ ಅಲ್ಲಿ ವಾಸವಾಗಿ ವಿದ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿ ತೊಡಗಿರುವ ಜನರು ಎರಡು ವಿಮಾನಗಳ ಮೂಳಕ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ.
ಈ ಎರಡೂ ವಾಣಿಗ್ಯ ವಿಮಾನಗಳ ಸ್ಥಳಾಂತರಕ್ಕೆ ನಿಯೋಜಿಸಲಾದ ವಿಮಾನಗಳು ಅಲ್ಲವಾದರೂ ಭಾರತ ಮುಂಬರುವ ಎಲ್ಲ ಸ್ಥಿತಿಗಳನ್ನು ಎದುರಿಸಲು ಸಿದ್ದತೆ ಮಾಡಿಕೊಂಡಿದೆ.
ಇರಾನ್‌ನಿಂದ ಆಗಮಿಸಿದ ಎಂಬಿಬಿಎಸ್ ವಿದ್ಯರ‍್ಥಿನಿ ಪ್ರಕಾರ ಅಲ್ಲಿ ಅಂತರಜಾಲ ಸೇವೆ ಇರಲಿಲ್ಲ ಎನ್ನುವುದು ಸತ್ಯ. ಆದರೆ ಯಾವುದೇ ಪ್ರತಿಭಟನೆಗಳನ್ನು ನಾನೇ ಸ್ವತ: ನೋಡಿಲ್ಲ ಎಂದರು.




