ನವದೆಹಲಿ: ಭೂಕಂಪ ಪೀಡಿತ ಮ್ಯಾನ್ಮಾರ್ ಗೆ ನೆರವಿನ ಹಸ್ತ ಚಾಚಿದ ಭಾರತ 15 ಟನ್ ಪರಿಹಾರ ಸಾಮಗ್ರಿ ರವಾನಿಸಿದೆ. ಸರಣಿ ಪ್ರಬಲ ಭೂಕಂಪಗಳ ನಂತರ ಸಂಕಷ್ಟದಲ್ಲಿರುವ ಮ್ಯಾನ್ಮಾರ್‌ಗೆ 15 ಟನ್‌ಗಳಿಗೂ ಹೆಚ್ಚು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ.
ಭಾರತವು ವಾಯುಪಡೆಯ ಕೇಂದ್ರ ಹಿಂಡನ್‌ನಿಂದ ಭಾರತೀಯ ವಾಯುಪಡೆಯ(IAF) C-130J ವಿಮಾನದ ಮೂಲಕ ಮ್ಯಾನ್ಮಾರ್‌ಗೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ.7.2 ತೀವ್ರತೆಯ ಭೂಕಂಪ ಸೇರಿದಂತೆ ಕಂಪನಗಳು ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್‌ನಲ್ಲಿ ಭಾರೀ ಹಾನಿ ಉಂಟುಮಾಡಿವೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ, ಶುಕ್ರವಾರ ರಾತ್ರಿ 11:56 ಕ್ಕೆ(ಸ್ಥಳೀಯ ಸಮಯ) ಮ್ಯಾನ್ಮಾರ್ ಮತ್ತೆ ಕಂಪಿಸಿದೆ. NCS ಪ್ರಕಾರ, ಇತ್ತೀಚಿನ ಭೂಕಂಪವು 10 ಕಿ.ಮೀ ಆಳದಲ್ಲಿ ಸಂಭವಿಸಿದ್ದು, ಇದು ನಂತರದ ಆಘಾತಗಳಿಗೆ ಗುರಿಯಾಗುವಂತೆ ಮಾಡಿದೆ.
ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದರು. ಎರಡೂ ದೇಶಗಳ ನಾಗರಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದ ಮೋದಿ ಭಾರತವು ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡಲು ಸಿದ್ಧವಾಗಿದೆ ಎಂದು ಹೇಳಿದ್ದರು. ವಿದೇಶಾಂಗ ಸಚಿವಾಲಯವು ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿರಲು ಸೂಚಿಸಿದ್ದರು.
ಪರಿಹಾರ ಪ್ಯಾಕೇಜ್‌ನಲ್ಲಿ ಕಳಿಸಿದ ವಸ್ತುಗಳು
ಟೆಂಟ್‌ಗಳು
ಸ್ಲೀಪಿಂಗ್ ಬ್ಯಾಗ್‌ಗಳು
ಕಂಬಳಿಗಳು
ತಿನ್ನಲು ಸಿದ್ಧವಾದ ಊಟ
ನೀರು ಶುದ್ಧೀಕರಣ ಘಟಕ
ನೈರ್ಮಲ್ಯ ಕಿಟ್‌ಗಳು
ಸೌರ ದೀಪಗಳು
ಜನರೇಟರ್ ಸೆಟ್‌ಗಳು
ಪ್ಯಾರಸಿಟಮಾಲ್, ಸಿರಿಂಜ್‌ಗಳು, ಕೈಗವಸುಗಳು ಮತ್ತು ಬ್ಯಾಂಡೇಜ್‌ಗಳಂತಹ ಅಗತ್ಯ ಔಷಧಗಳು