ಮ್ಯಾನ್ಮಾರ್ : ಭೂಕಂಪ ಪೀಡಿತ ಮ್ಯಾನ್ಮಾರ್‌ನಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಮ್ಯಾ80 ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ತುಕಡಿಯನ್ನು ನಿಯೋಜಿಸಲು ಭಾರತ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.
ನೆರೆಯ ದೇಶಕ್ಕೆ ಸಹಾಯ ಮಾಡಲು ಫೆಡರಲ್ ವಿಪತ್ತು ಆಕಸ್ಮಿಕ ಪಡೆಯ ಸಿಬ್ಬಂದಿಯನ್ನು ‘ಆಪರೇಷನ್ ಬ್ರಹ್ಮ’ ಅಡಿಯಲ್ಲಿ ಭೂಕಂಪ ರಕ್ಷಣಾ ಸಾಧನಗಳೊಂದಿಗೆ ನಿಯೋಜಿಸಲಾಗುತ್ತಿದೆ.
“80 NDRF ಸಿಬ್ಬಂದಿಯ ತಂಡವನ್ನು ಮ್ಯಾನ್ಮಾರ್‌ಗೆ ಕಳುಹಿಸಲಾಗುತ್ತಿದೆ. ತಂಡ ಶನಿವಾರ ಸಂಜೆಯ ವೇಳೆಗೆ ತಲುಪುವ ನಿರೀಕ್ಷೆಯಿದೆ” ಎಂದು ಮೂಲಗಳು ತಿಳಿಸಿವೆ. ಕಮಾಂಡೆಂಟ್ ಶ್ರೇಣಿಯ ಅಧಿಕಾರಿಯೊಬ್ಬರು ತಂಡವನ್ನು ಮುನ್ನಡೆಸಲಿದ್ದಾರೆ.
ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್ ಶುಕ್ರವಾರ ತೀವ್ರ ಭೂಕಂಪದಿಂದ ನಲುಗಿಹೋಗಿದ್ದು, ಕಟ್ಟಡಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳು ನಾಶವಾಗಿವೆ.
ಮ್ಯಾನ್ಮಾರ್‌ನಲ್ಲಿ ಕನಿಷ್ಠ 1,002 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 2015 ರ ನೇಪಾಳ ಭೂಕಂಪ ಮತ್ತು 2023ರ ಟರ್ಕಿಯೆ ಭೂಕಂಪದ ಸಮಯದಲ್ಲಿಯೂ ಭಾರತ NDRF ನ್ನು ನಿಯೋಜಿಸಿತ್ತು.
ಶನಿವಾರ ಭಾರತ ಮ್ಯಾನ್ಮಾರ್‌ನ ಯಾಂಗೂನ್ ನಗರಕ್ಕೆ ಭಾರತೀಯ ವಾಯುಪಡೆಯ (IAF) C130J ಮಿಲಿಟರಿ ಸಾರಿಗೆ ವಿಮಾನದ ಮೂಲಕ ಸುಮಾರು 15 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ.
ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿನಾಶಕಾರಿ ಭೂಕಂಪದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಭಾರತ ಎರಡೂ ದೇಶಗಳಿಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡಲು ಸಿದ್ಧವಾಗಿದೆ ಎಂದು ಹೇಳಿದರು. ಭಾರತ ಪೂರ್ವ ಭಾಗದಲ್ಲಿ ಮ್ಯಾನ್ಮಾರ್‌ನೊಂದಿಗೆ 1,643 ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ.