ಕೋಲ್ಕತ್ತಾ: ಪ್ರವಾಸಿ ದಕ್ಷಿಣ ಆಫ್ರಿಕಾ ಹಾಗೂ ಭಾರತ ಕ್ರಿಕೆಟ್ ತಂಡಗಳ ನಡುವೆ ನಾಳೆ ಇಲ್ಲಿನ ಈಡರ್ನ್ ಗಾರ್ಡನ್ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ಶುಭಮಾನ್ ಗಿಲ್ ನಾಯಕತ್ವದ ಭಾರತ ತಂಡವು ತವರು ನೆಲದಲ್ಲಿ ಪಂದ್ಯ ಆಡಲಿದ್ದು, ಗೆಲುವಿನ ಹೆಚ್ಚಿನ ಅವಕಾಶವನ್ನು ಹೊಂದಿದೆ. ಪ್ರವಾಸಿ ತಂಡದ ಗೆಲ್ಲಲು ಭಾರತ ಸ್ಪಿನ್ನರುಗಳನ್ನು ನೆಚ್ಚಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ರ ಹಾಗೂ ರವೀಂದ್ರ ಜಡೆಜಾ ರೂಪದಲ್ಲಿ ಮೂವರು ಸ್ಪಿನ್ನರುಗಳೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ.




