ಅಬುದಾಬಿ: ಭಾರತ ಕ್ರಿಕೆಟ್ ತಂಡವು ಇಲ್ಲಿ ನಡೆದ ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ‘ಎ’ ಗುಂಪಿನ ಕಡೆಯ ಲೀಗ್ ಪಂದ್ಯದಲ್ಲಿ ಓಮಾನ್ ತಂಡವನ್ನು 21 ರನ್ ಗಳಿಂದ ಮಣಿಸಿತು.
ಶೇಖ್ ಜಯೀದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ತಂಡ ಎ, ಗುಂಪಿನಲ್ಲಿ 6 ಅಂಕಗಳನ್ನು ಗಳಿಸುವ ಮೂಲಕ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯಿತು. ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ನಿಗದಿತ 20 ಓವರುಗಳಲ್ಲಿ 8 ವಿಕೆಟ್ ಗೆ 188 ರನ್ ಗಳಿಸತು. ಪ್ರತಿಯಾಗಿ ಆಡಿದ ಓಮಾನ್ ಉತ್ತಮ ಪ್ರತಿರೋಧ ನೀಡುವುದರ ಮೂಲಕ 4 ವಿಕೆಟ್ ಗೆ 167 ರನ್ ಗಳನ್ನು ಗಳಿಸಿ ವೀರೋಚಿತ ಸೋಲು ಕಂಡಿತು.
ಸ್ಕೋರ್ ವಿವರ
ಭಾರತ 20 ಓವರುಗಳಲ್ಲಿ 8 ವಿಕೆಟ್ ಗೆ 188
ಸಂಜು ಸ್ಯಾಮ್ಸನ್ 56 (45 ಎಸೆತ, 3 ಬೌಂಡರಿ, 3 ಸಿಕ್ಸರ್), ಅಭಿಷೇಕ ಶರ್ಮಾ 38 ( 15 ಎಸೆತ, 5 ಬೌಂಡರಿ, 2 ಸಿಕ್ಸರ್)
ಅಕ್ಷರ ಪಟೇಲ್ 26 ( 13 ಎಸೆತ, 3 ಬೌಂಡರಿ, 1 ಸಿಕ್ಸರ್) ತಿಲಕ್ ವರ್ಮಾ 29 ( 18 ಎಸೆತ, 1 ಬೌಂಡರಿ, 2 ಸಿಕ್ಸರ್) ಶಾ ಪೈಸಾಲ್ 23 ಕ್ಕೆ 2)
ಓಮಾನ್ 4 ವಿಕೆಟ್ ಗೆ 167
ಅಮೀರ್ ಖಲೀಮ್ 64 ( 46 ಎಸೆತ, 7 ಬೌಂಡರಿ, 2 ಸಿಕ್ಸರ್) ಹಮದ್ ಮೀರ್ಜಾ 51 ( 33 ಎಸೆತ, 5 ಬೌಂಡರಿ, 2 ಸಿಕ್ಸರ್)
ಕುಲದೀಪ್ ಯಾದವ್ 23 ಕ್ಕೆ 1, ಹಾರ್ಧಿಕ ಪಾಂಡ್ಯಾ 26 ಕ್ಕೆ 1)
———————————————————————-ಪಂದ್ಯ ಶ್ರೇಷ್ಠ: ಸಂಜು ಸ್ಯಾಮ್ಸನ್




