Ad imageAd image

‘ಆಪರೇಷನ್ ಸಿಂದೂರ್‌ದಿಂದ ಭಾರತ ಶಕ್ತಿ ಸಾಬೀತು’

Bharath Vaibhav
‘ಆಪರೇಷನ್ ಸಿಂದೂರ್‌ದಿಂದ ಭಾರತ ಶಕ್ತಿ ಸಾಬೀತು’
WhatsApp Group Join Now
Telegram Group Join Now

ಪಾವಗಡ : ನಗರದಲ್ಲಿ ದೇಶಪ್ರೇಮ.ತಿರಂಗಾಯಾತ್ರೆ ಭವ್ಯ ನೋಟ.ಭಾರತ ಮಾತೆಗೆ ಜಯವಾಗಲಿ ಸಂಸದ ಗೋವಿಂದ ಕಾರಜೋಳ ಮತ್ತು ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ ಕಾರ್ಯಕರ್ತರಿಂದ ಭಾರತ ಮಾತಾ ಕೀ ಜೈ ಘೋಷಣೆ.

ಆಪರೇಷನ್ ಸಿಂದೂರ್‌ದಿಂದ ಭಾರತ ಶಕ್ತಿ ಸಾಬೀತು ಪಡಿಸಿದರು ಭಾರತೀಯ ಸೇನಾ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ದಿನಾಂಕ 15/05/25 ಗುರುವಾರ ಸಾಯಂಕಾಲ 5 ಗಂಟೆಗೆ ಪಟ್ಟಣದಲ್ಲಿ ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪಾವಗಡ ಪಟ್ಟಣದಲ್ಲಿರುವ ಟೋಲ್‌ಗೇಟ್ ಬಳಿ ದೇಶ ಭಕ್ತರು, ಇಲ್ಲಿನ ಡಾ.ಬಿ.ಆ‌ರ್. ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಸಲ್ಲಿಸಿ ಭಾರತ ಸೇನೆ ಪರ ಜೈಕಾರ ಕೂಗಿ ಬಳಿಕ ಬಳ್ಳಾರಿ ರಸ್ತೆ ಮೂಲಕ ಶನಿಮಾತ್ಮ ಸ್ವಾಮಿ ವೃತ್ತದವರೆವಿಗೆ ತಿರಂಗಯಾತ್ರೆ ನಡೆಸಿ ಪಕ್ಷಾತೀತವಾಗಿ ಪಾವಗಡ ತಾಲೂಕಿನ ಸಾರ್ವಜನಿಕರ ದೇಶಭಕ್ತರ ಕಡೆಯಿಂದ ಜೈ ಭಾರತ ಎಂಬ ಘೋಷಣೆ ಕೂಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಸೇನೆಗೆ ಅಭಿನಂದನೆ ಸಲ್ಲಿಸಿದರು.

ಪಾವಗಡದಲ್ಲಿ ನಡೆದ ತಿರಂಗ ಯಾತ್ರೆಯಲ್ಲಿ ಸಂಸದ ಗೋವಿಂದ ಕಾರಜೋಳ ಮತ್ತು ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ ಪಾಲ್ಗೊಂಡಿದ್ದರು.

ಇದೇ ವೇಳೆ ಮಾತನಾಡಿದ ಶನೇಶ್ವರಸ್ವಾಮಿ ಸರ್ಕಲ್ ನಲ್ಲಿ ಚಿತ್ರದುರ್ಗ ಲೋಕಸಭಾ ಸಂಸದರಾದ ಗೋವಿಂದ ಎಂ.ಕಾರಜೋಳ ಮಾತನಾಡಿ, ಪದೇ ಪದೇ ಅಕ್ರಮ ದಾಳಿ ನಡೆಯುವ ಮೂಲಕ ಭಾರತಕ್ಕೆ ಹಾನಿ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸೇನೆ ಸರಿಯಾದ ಪಾಠ ಕಲಿಸಿದೆ. ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ನಿರ್ಣಯ ಅತ್ಯಂತ ಸೂಕ್ತವಾದ ನಿರ್ಧಾರವಾಗಿದೆ. ತಿಳಿಸಿರುತ್ತಾರೆ

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಪಾಕಿಸ್ತಾನ ಭಯೋತ್ಪಾದಕರ ವಿರುದ್ಧ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಭಾರತ ಸೇನೆ ತೆಗೆದುಕೊಂಡ ನಿರ್ಣಯ ಅತ್ಯಂತ ನಿರ್ಧಾರವನ್ನು ತೆಗೆದುಕೊಂಡು ಸೂಕ್ತ
ಪ್ರಧಾನಿ ಮೋದಿ ಹಾಗೂ ಪಾಕಿಸ್ತಾನ ಮಟ್ಟಹಾಕಲು ಸರಿಯಾದ ದಿಕ್ಕಿನಲ್ಲಿ ಹೋರಾಟ ನಡೆಸಿದ್ದ ಭಾರತದ ಸೇನೆಗೆ ಅಭಿನಂದನೆ ತಿಳಿಸಿದರು.

ಇದೇ ವೇಳೆ ತಿರಂಗ ಯಾತ್ರೆಗೆ ಭಾಗವಹಿಸಿದವರು.ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ, ಕೊರಟಗೆರೆ ಅನಿಲ್‌ಕುಮಾರ್, ಜಿಲ್ಲಾ ಬಿಜೆಪಿ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಗೌಡ,
ತಾಲೂಕು ಬಿಜೆಪಿ ಅಧ್ಯಕ್ಷ ಅಶೋಕ್, ಡಾ.ಜಿ.ವೆಂಕಟರಾಮಯ್ಯ, ಸಮಾಜ ಸೇವಕರು ನಾಗೇಂದ್ರ ಕುಮಾರ್ ಶ್ರೀ ರಾಮ್ ಸೇನಾ ರಾಮಾಂಜಿ. ರೈತ ಸಂಘದ ಗಂಗಾಧರ ನಾಯ್ಡು. ದಲಿತ ಮುಖಂಡ ಕೃಷ್ಣಮೂರ್ತಿ ಬಿ ಎಸ್ ಪಿ ಮಂಜುನಾಥ್.ಹಾಗೂ ಇತರೆ ನೂರಾರು ಮಂದಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ವರದಿ :  ಶಿವಾನಂದ  

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!