ಬೆಂಗಳೂರು: ಭಾರತದಲ್ಲಿ ಏಪ್ರಿಲ್ ನಲ್ಲಿ ನಿರುದ್ಯೋಗ ಪ್ರಮಾಣ ಶೇ. 5.1 ರಷ್ಟು ತಗ್ಗಿದೆ. ಇದೇ ಮೊದಲ ಬಾರಿಗೆ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ, ಮಾಸಿಕ ಕಾರ್ಮಿಕರ ಸಮೀಕ್ಷೆಯನ್ನು (PLFS) ಬಿಡುಗಡೆ ಮಾಡಿದೆ.
ಇದರಲ್ಲಿ ಪುರುಷರಲ್ಲಿ ನಿರುದ್ಯೋಗ ಪ್ರಮಾಣ ಶೇ. 5.2 ರಷ್ಟಿದ್ದು, ಮಹಿಳೆಯರ ನಿರುದ್ಯೋಗ ಪ್ರಮಾಣ ಶೇ 5 ರಷ್ಟಿದ್ದೆ. ಮಹಿಳೆಯರಿಗಿಂತ ಪುರುಷರ ನಿರುದ್ಯೋಗ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ ಎಂದು ತೋರಿಸಲಾಗಿದೆ.
ಇಲ್ಲಿಯವರೆಗೆ ಸಮೀಕ್ಷೆಯನ್ನು ತ್ರೈಮಾಸಿಕ ಆಧಾರದ ಮೇಲೆ ಬಿಡುಗಡೆ ಮಾಡಲಾಗುತ್ತಿತ್ತು. ಇನ್ನು ಮುಂದೆ ಮಾಸಿಕ PLFS ಬಿಡುಗಡೆಯಿಂದ ಸಮಯೋಚಿತ ನೀತಿ ರೂಪಿಸುವಲ್ಲಿ ನೆರವಾಗುತ್ತದೆ. 15-29 ವಯಸ್ಸಿನವರಲ್ಲಿ ನಿರುದ್ಯೋಗ ಪ್ರಮಾಣ ಶೇ. 13.8 ರಷ್ಟಿದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗದ ಪ್ರಮಾಣ ಶೇ. 12. 3 ರಷ್ಟಿದೆ. ನಗರ ಪ್ರದೇಶಗಳಲ್ಲಿ ಇದು ಶೇ. 17.2 ರಷ್ಟಿದೆ.
ಏಪ್ರಿಲ್ 2025 ರ ಮಾಸಿಕ ಮಾಹಿತಿಯು ಭಾರತದ ಕಾರ್ಮಿಕರ ಸಂಖ್ಯೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಗಮನಾರ್ಹವಾದ ಮಾಹಿತಿ ನೀಡುತ್ತದೆ ಎಂದು ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್ನ ಅಸೋಸಿಯೇಟ್ ಡೈರೆಕ್ಟರ್ ಪರಾಸ್ ಜಸ್ರೈ ಹೇಳಿದ್ದಾರೆ.




