ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ, ಭಾರತ ಮತ್ತೆ ಜಲ ಮುಷ್ಕರ ನಡೆಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಿಂದಾಗಿ, ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸಬಾರ್ ಅಣೆಕಟ್ಟು ಮತ್ತು ಬಗ್ಗಿ ಹಾರ್ ಅಣೆಕಟ್ಟಿನ ಹಲವಾರು ಗೇಟ್‌ಗಳನ್ನು ತೆರೆಯಲಾಗಿದ್ದು, ಇದರಿಂದಾಗಿ ವಾಕಿಸ್ತಾನದ ಕಡೆಗೆ ನೀರಿನ ಹರಿವು ಹಬ್ಬಾಗಿದೆ.
ಪಹಲ್ಯಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು. ಕಳೆದ ಕೆಲವು ದಿನಗಳ ಹಿಂದೆ, ಭಾರತವು ಪಾಕಿಸ್ತಾನದ ಕಡೆಗೆ ನೀರು ಹರಿಯುವುದನ್ನು ನಿಲ್ಲಿಸಲು ಸಲಾಲ್ ಮತ್ತು ಬಾಗಿಹಾರ್ ಅಣೆಕಟ್ಟುಗಳ ದ್ವಾರಗಳನ್ನು ಮುಚ್ಚಿತ್ತು. ಇದರಿಂದಾಗಿ ಪಾಕಿಸ್ತಾನದ ಚೆನಾಬ್ ನದಿಯ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿತ್ತು. ಆದರೆ ಈಗ ಭಾರೀ ಮಳೆ ಮತ್ತು ಜಲಾಶಯಗಳು ತುಂಬಿದ ಬಳಿಕ, ಭಾರತವು ಗೇಟ್‌ಗಳನ್ನು ತರದಿದೆ, ಇದರಿಂದಾಗಿ ಹೆಚ್ಚಿನ ಪ್ರಮಾಣದ ನೀರು ಪಾಕಿಸ್ತಾನದ ಕಡೆಗೆ ಹರಿಯುತ್ತಿದೆ.
ಪ್ರವಾಹ ಸನ್ನಿವೇಶದ ಒತ್ತಡ ಸೃಷ್ಟಿಸಲು ನೀರು ಹರಿಬಿಡುವ ತಂತ್ರಗಾರಿಕೆ ರೂಪಿಸಲಾಗಿದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ. ನೀರಿನ ಹರಿವಿನಲ್ಲಿ ಏರಿಳಿತ ಮಾಡುವ ಮೂಲಕ ಕೃಷಿ ವ್ಯವಸ್ಥೆಗೆ ಬಲವಾದ
ಪಟ್ಟು ಕೊಡಲಾಗುತ್ತಿದೆ. ಜತೆಗೆ ಪಾಕಿಸ್ತಾನದಲ್ಲಿ ನೀರಿನ ಅಭಾವ ಉಂಟು ಮಾಡುವುದು ತಂತ್ರಗಾರಿಕೆಯ ಭಾಗವಾಗಿದೆ ಎನ್ನಲಾಗಿದೆ.
ಒಂದಡ ನೀರಿನ ಕೊರತೆಯಿಂದ ಕೃಷಿ ವಲಯಕ್ಕೆ ತೊಂದರೆಯಾಗಿತ್ತು, ಈಗ ಪ್ರವಾಹದ ಭೀತಿಯಿಂದ ಜನ ತಲ್ಲಣಗೊಂಡಿದ್ದಾರೆ. ಈ ಬಗ್ಗೆ ಭಾರತವನ್ನು ದೂಷಿಸಲು ಪಾಕಿಸ್ತಾನಕ್ಕೆ ಅವಕಾಶವಿಲ್ಲ, ಏಕೆಂದರೆ ಒಪ್ಪಂದ ರದ್ದಾದ ಬಳಿಕ ನೀರಿನ ನಿಯಂತ್ರಣ ಸಂಪೂರ್ಣವಾಗಿ ಭಾರತದ ಕೈಯಲ್ಲಿದೆ.
ಗುರುವಾರವೂ ಭಾರತವು ಲಾಹೋರ್ ಮತ್ತು ಕರಾಚಿ ಸೇರಿದಂತೆ ಪಾಕಿಸ್ತಾನದ 9 ನಗರಗಳ ಮೇಲೆ ಡೋನ್ ದಾಳಿ ನಡೆಸಿತ್ತು. ಈ ದಾಳಿಯು ಕರಾಚಿ ಬಂದರು, ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ ಮತ್ತು ಯುದ್ಧ ವಿಮಾನಗಳು ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಧ್ವಂಸವನ್ನುಂಟುಮಾಡಿದೆ. ಈಗ ಭಾರತ ಪಾಕಿಸ್ತಾನದ ವಿರುದ ಜಲದಾಳಿ ನಡೆಸಿದೆ.




