Ad imageAd image

ಮರು ಮತದಾನಕ್ಕೆ ಸಿದ್ಧವಾದ ಇಂಡಿಗನತ್ತ ಗ್ರಾಮ

Bharath Vaibhav
ಮರು ಮತದಾನಕ್ಕೆ ಸಿದ್ಧವಾದ ಇಂಡಿಗನತ್ತ ಗ್ರಾಮ
WhatsApp Group Join Now
Telegram Group Join Now

ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ, ಗ್ರಾಮ ಪಂಚಾಯಿತಿಗೆ ಸೇ ರಿದ ಇಂಡಿಗನತ್ತ ಗ್ರಾಮದಲ್ಲಿ ಮತಯಂತ್ರವನ್ನು ದ್ವಂಶ ಮಾಡಿದ ಹಿನ್ನೆಲೆಯಲ್ಲಿ ಇದೇ ಏಪ್ರಿಲ್ 29ರ ಸೋಮವಾರರಂದು ಮರು ಮತದಾನ ಮಾಡಲು ಸಿದ್ಧವಾಗಿದೆ
ಇಂಡಿಗನತ್ತ ಗ್ರಾಮದಲ್ಲಿ 146 ರ ಮತಗಟ್ಟೆ ಸಂಖ್ಯೆಯಲ್ಲಿ ಗ್ರಾಮಸ್ಥರು ಮತದಾನವನ್ನು ಬಹಿಸ್ಕರಿಸಿದ್ದರು.
ಆದರೆ ಇದೇ ಮತಗಟ್ಟೆಯ ವ್ಯಾಪ್ತಿಯಲ್ಲಿ ಮಂದಾರ ಗ್ರಾಮದ ನಿವಾಸಿಗಳು ಮತ ಚಲಾಯಿಸಲು ಮತಗಟ್ಟೆಗೆ ಹೋಗಿದ್ದ, ವೇಳೆ ಇಂಡಿಗನತ್ತ ಗ್ರಾಮಸ್ಥರು ರೊಚ್ಚಿಗೆದ್ದು ಮತಯಂತ್ರವನ್ನು ದ್ವಂಶ ಮಾಡಿದರು.

ಈ ಹಿನ್ನಲೆಯಲ್ಲಿ ಚುನಾವಣೆ ಅಧಿಕಾರಿಯಾಗಿದ್ದ ಶಿಲ್ಪನಾಗ್ ರವರು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದರು. ಇವರ ವರದಿಯಂತೆ ಇದೇ ಏಪ್ರಿಲ್ 29ರ ಸೋಮವಾರದಂದು 7:00 ಯಿಂದ ಸಂಜೆ 6:00 ವರೆಗೆ ಮರು ಮತದಾನ ಮಾಡಲು ಸಮಯ ನಿಗದಿ ಮಾಡಲಾಯಿತು.

ಚುನಾವಣಾ ಆಯೋಗದ ಸೂಚನೆಗಳಿಗೆ ಅನುಗುಣವಾಗಿ ಸದರಿ ಮತಗಟ್ಟೆಯಲ್ಲಿ ಹೊಸದಾಗಿ ಮರುಮತದಾನವನ್ನು ನಡೆಸಲಾಗುವುದು.ಮತದಾನದ ಪ್ರದೇಶಗಳಿಗೆ ವ್ಯಾಪಕವಾಗಿ ಪ್ರಚಾರವನ್ನು ನೀಡಿ ಮರುಮ ಮತದಾನದ ಬಗ್ಗೆ ರಾಜಕೀಯ ಪಕ್ಷಗಳಿಗೆ ಮತ್ತು ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಲಿಖಿತವಾಗಿ ತಿಳಿಸಿ ಎಂದು ಚುನಾವಣಾ ಆಯೋಗದ ಕಾರ್ಯದರ್ಶಿ ಅವಧೇಶ್ ಕುಮಾರ್ ಸಿನ್ಹ ತಿಳಿಸಿದರು

ವರದಿ :ಸ್ವಾಮಿ ಬಳೆಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!