Ad imageAd image

ಇಂದಿರಾ ಕ್ಯಾಂಟೀನ್ ಬಡವರ ಹಸಿವು ನೀಗಿಸುವ ಕಾಮದೇನು:  ಎನ್ ವೈ ಗೋಪಾಲಕೃಷ್ಣ

Bharath Vaibhav
ಇಂದಿರಾ ಕ್ಯಾಂಟೀನ್ ಬಡವರ ಹಸಿವು ನೀಗಿಸುವ ಕಾಮದೇನು:  ಎನ್ ವೈ ಗೋಪಾಲಕೃಷ್ಣ
WhatsApp Group Join Now
Telegram Group Join Now

ಮೊಳಕಾಲ್ಮುರು:  ಇಂದಿರಾ ಕ್ಯಾಂಟೀನ್ ಬಡವರ ಕೂಲಿ ಕಾರ್ಮಿಕರ ವಿದ್ಯಾರ್ಥಿಗಳ ಹಸಿವು ನೀಗಿಸುವ ಎಂದು ಶಾಸಕರಾದ ಎನ್ ವೈ ಗೋಪಾಲಕೃಷ್ಣರವರು ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಶಾಸಕ ಎನ್ ವೈ ಗೋಪಾಲಕೃಷ್ಣ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದರು. ಇಂದಿರಾ ಕ್ಯಾಂಟೀನ್ ಬಡವರ ಕಾಮಧೇನು ಆಗಿಲಿದೆ,ಕೂಲಿ ಕಾರ್ಮಿಕರು ,ವಿದ್ಯಾರ್ಥಿಗಳು ಬಡವರ್ಗದವರ ಹಸಿವು ನೀಗಿಸಲಿದೆ ಎಂದರು.

ತಾಲ್ಲೂಕಿನಲ್ಲಿ ಈ ಹಿಂದಿನ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ಬಂದರೂ ಸಚಿವ ಶ್ರೀರಾಮಲು ಇಚ್ಚೆ ತೋರದ ಕಾರಣ ನೆನೆಗುದಿಗೆ ಬಿದ್ದಿತ್ತು, ಬಿಜೆಪಿ ಅವಧಿಯಲ್ಲಿ ಶ್ರೀರಾಮುಲುಗೆ 70 ರಿಂದ 80 ಜನ ಪಿಎಗಳು ಇದ್ದರು, ಅವರು ಬಂದು ಹೋದ ನಂತರ ಊರಿಗೆ ಒಬ್ಬರಂತೆ ಸೃಷ್ಟಿ ಮಾಡಿ ಹೋಗಿದ್ದಾರೆ.2013ರಲ್ಲಿ ನನ್ನ ಸೋಲಿಸುವ ಭರದಿಂದ ತಿಪ್ಪೇಸ್ವಾಮಿಯನ್ನು ಗೆಲ್ಲಿಸಿದ್ದು ಬಿಟ್ಟರೆ ತಿಪ್ಪೇಸ್ವಾಮಿಯನ್ನು ಶಾಸಕರನ್ನಾಗಿ ಆಯ್ಕೆ ಮಾಡುವ ಮನಸ್ಸು ಜನರಿಗಿರಲಿಲ್ಲ.

ಸೋತು ಸುಣ್ಣವಾಗಿದ್ದ ತಿಪ್ಪೇಸ್ವಾಮಿಯನ್ನು ಅಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷನನ್ನಾಗಿ ಮಾಡಿದ್ದೇ ನಾನು ಎಂದು ಮಾಜಿ ಶಾಸಕ ಮತ್ತೂ ಸಚಿವರ ವಿರುದ್ದ ವಾಗ್ದಾಳಿ ನಡೆಸಿದರು. ನಾನು ಯು ಟರ್ನ್ ಹೋಗುವನ್ನಲ್ಲ್ಲ, ಒನ್ ವೇ ನಲ್ಲಿ ಹೋಗುವನು.ವಿಧಾನಸೌಧಕ್ಕೆ ಹೋಗುವುದಿಲ್ಲ ಎಂದು ನನ್ನನ್ನು ದೂರುತ್ತಿರುವ ಬಿಜೆಪಿಗರಿಗೆ ನಾನು ವಿಧಾನ ಸಭಾ ಉಪಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದೇ,. ಎನ್ನುವುದು ಅರಿವಿರಲಿ.ವಿರೋಧ ಪಕ್ಷ ಮತ್ತು ಆಡಳಿತ ಪಕ್ಷವನ್ನು ಕಂಟ್ರೋಲ್ ಮಾಡಿದ್ದೇನೆ ಎಷ್ಟೋ ಜನ ಶಾಸಕರಿಗಳಿಗೆ ಟೀಚ್ ಮಾಡಿದ್ದೇನೆ, ನನ್ನ ವಿರುದ್ಧ ಮಾತನಾಡುವವರು ನಾನೂ ರಾಜಕೀಯ ಮಾಡುವಾಗ ಹುಟ್ಟಿಯೇ ಇರಲಿಲ್ಲ ನನ್ನ ರಾಜಕೀಯ ಅನುಭವನ್ನು ಪ್ರಶ್ನೆ ಮಾಡುವ ನೈತಿಕತೆ ನಿಮಗಿಲ್ಲ ಎಂದು ಬಿಜೆಪಿ ಪಕ್ಷದ ವಿರುದ್ಧ ತರಾಟೆಗೆ ತೆಗೆದುಕೊಂಡರು.

ಅದೇ ರೀತಿ ಮಾಜಿ ಪ.ಪಂ ಅಧ್ಯಕ್ಷ ಪ್ರಕಾಶ್ ಮಾತನಾಡಿ,ಇಂದಿರಾ ಕ್ಯಾಂಟೀನ್ ಮಾಡಲು ಬಿಡದ ಬಿಜೆಪಿಯವರು
ಶಾಸಕರನ್ನು ದೂರುತ್ತಿದ್ದಾರೆ.2 ಎಕರೆ ಜಾಗವನ್ನು ಕೊಂಡ್ಲಹಳ್ಳಿಯ ಬಿಜೆಪಿ ಮುಖಂಡರ ಬಳಿ ಅಕ್ರಮವಾಗಿ ಸ್ವಾಧೀನದಲ್ಲಿತ್ತು,ಇದನ್ನು ಕಳೆದ ವರ್ಷ ತಹಶೀಲ್ದಾರ್ ರೂಪ ಅವರು ಸರಕಾರದ ವಶಕ್ಕೆ ಪಡೆದುಕೊಂಡಿದ್ದರು.ಇದನ್ನು ಸಹಿಸದೇ ಬಿಜೆಪಿಗರು ತಾಲೂಕು ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ , ಆರ್ ಎಸ್ ಎಸ್ ಬಜರಂಗದಳ ಇದ್ದಲ್ಲಿ ಅನುಕೂಲಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸುತ್ತಿರ!ನಾಲ್ಕು ಹೋಬಳಿಗಳಲ್ಲಿ ನಮ್ಮ ಶಾಸಕರ ಬಳಿ ಈಗಾಗಲೇ ಬಿಜೆಪಿಯ 80% ಕಾರ್ಯಕರ್ತರು ಇದ್ದಾರೆ ಹೀಗಾಗಿ ನೀವು ಹತಾಶೆಯಲ್ಲಿದಿರಿ ಎಂದು ವಾಗ್ಧಾಳಿ ನಡೆಸಿದರು ಕಾಂಗ್ರೆಸ್ ಸಂಸ್ಕೃತಿ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವುದು ಬಿಜೆಪಿಯವರ ಸಂಸ್ಕೃತಿ ಒಡೆದು ಹಾಳುವ ನೀತಿ ಎಂದು ಬಿಜೆಪಿ ಪಕ್ಷದ ವಿರುದ್ಧ ಮಾತನಾಡಿದರು.

ಅದೇ ರೀತಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಸುಭಾನ್ ಸಾಬ್ ಮಾತನಾಡಿ, ನಮ್ಮ ಶಾಸಕರು ಸೌಮ್ಯ ಸ್ವಭಾವದವರು ಅವರಲ್ಲಿ ಎಲ್ಲಾ ಗುಣವು ಹೊಂದಿಕೊಂಡಿದೆ. ಬಿಜೆಪಿಯವರ ತರಹ ತಾರತಮ್ಯ ಮಾಡುವರಲ್ಲ. ಕಾಂಗ್ರೆಸ್ ಪಕ್ಷ ಇತಿಹಾಸವಿರುವ ಪಕ್ಷ ನಮ್ಮ ಶಾಸಕರು ಸ್ವಂತ ಸ್ಥಳದಲ್ಲಿ ಕುಳಿತುಕೊಂಡು ಎಲ್ಲಾ ಕೆಲಸಗಳನ್ನು ಮಾಡುತ್ತಾರೆ ಅದಕ್ಕೆ ಉದಾಹರಣೆ ಎಂಬಂತೆ 200 ಹಾಸಿಗೆಯ ಹಾಸ್ಪಿಟಲ್ ಮಂಚೂರು ಮಾಡಿಸಿದ್ದಾರೆ. ಇನ್ನು ಅನೇಕ ಕೆಲಸಗಳು ತೆರೆಮರೆಯಲ್ಲಿ ಇವೆ ನಾವು ಪ್ರಚಾರ ಗಿಟ್ಟಿಸಿಕೊಳ್ಳುವುದರಲ್ಲ ಎಂದು ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರು ಇಂದಿರಾ ಕ್ಯಾಂಟೀನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಭಾಗದಲ್ಲಿ ಹಳ್ಳಿಗಳಿಂದ ಬರುವ ಬಡ ಜನರಿಗೆ ಊಟದ ವ್ಯವಸ್ಥೆ ಇರಲಿಲ್ಲ ಶಾಸಕರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಶಾಸಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರು ಮತ್ತು ಗುತ್ತಿಗೆದಾರರಾದ ಎಸ್ ಖಾದರ್, ಪಂಚಾಯತಿ ಅಧ್ಯಕ್ಷರಾದ ಲೀಲಾವತಿ ಸಿದ್ದಣ್ಣ ಉಪಾಧ್ಯಕ್ಷರಾದ ಎಂ ಎನ್ ಮಂಜಣ್ಣ ಸದಸ್ಯರುಗಳಾದ ಅಬ್ದುಲ್, ದೇವದಾಸ್, ಮುಖಂಡರ ಮುಖಂಡರುಗಳಾದ ಪಟೇಲ್ ಜಿ ಪಾಪ ನಾಯಕ್ , ದೇವಯ್ಯ, ಮಾರು ನಾಯಕ್ ಈ ಗೋಪಾಲ್, ಭರತ್ ಗ್ಯಾಸ್ ಮಾಲೀಕರಾದ ಮಹಮ್ಮದ್, ರಾಯಪುರದ ಸುರೇಶ್, ಕಾಂಗ್ರೆಸ್ ಕಾರ್ಯಕರ್ತರು ಇನ್ನೂ ಹಲವರು ಉಪಸ್ಥಿತರಿದ್ದರು.

ವರದಿ: ಪಿಎಂ ಗಂಗಾಧರ

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!