ನಿಪ್ಪಾಣಿ :ನೀವೇನಾದರೂ ಉರಗಗಳ ಅಂದರೆ ಹಾವುಗಳು ಇರುವ ಶಾಲೆಯನ್ನು ನೋಡಿದ್ದೀರಾ.?ಇಲ್ಲವಲ್ಲ ಹಾಗಾದರೆ ಬನ್ನಿ.ನಾವ ತೋರಿಸ್ತೀವಿ ನೋಡಿ * ನೆರೆಯ ಮಹಾರಾಷ್ಟ್ರದ ಕೊಲ್ಲಾಪುರ. ಜಿಲ್ಲೆಯ ಚಂದ್ಗಡ್ ತಾಲೂಕಿನ ಮಾಮ.ಸಾಹೇಬ್ ಲಾಡ್ ವಿದ್ಯಾಲಯ.ಸದರಿ ಶಾಲೆ 1966 ರಿಂದಲೇ ಚರ್ಚಿಯಲ್ಲಿದೆ. ಮಾಮಸಾಹೇಬ್ ಟಕ್ಕೇಕರ್ ಎಂಬ ಸರ್ಪಮಿತ್ರ ಸರ್ಪಗಳ ಸಂಗೋಪನೆಗೋಸ್ಕರ ಹಾಗೂ ಸರ್ಪ ನಮ್ಮ ಶತ್ರುವಲ್ಲ ಮಿತ್ರ ಎಂಬುದನ್ನು ಖಚಿತಪಡಿಸಲು ಶಾಲೆಯ ಮಾಧ್ಯಮದಿಂದ ಸರ್ಪ ಜ್ಞಾನ ಪ್ರಾರಂಭಿಸಿದರು. ಈ ಶಾಲೆಯಲ್ಲಿಯ ಪ್ರತಿ ವಿದ್ಯಾರ್ಥಿಗೆ ಪಠ್ಯಪುಸ್ತಕಗಳ ಜೊತೆಗೆ ಸರ್ಪಗಳ ಕುರಿತು ಸಂಪೂರ್ಣ ಮಾಹಿತಿ ನೀಡಲು
ಪ್ರಾರಂಭಿಸಿದ್ದಾರೆ.
ಸದರಿ ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಸರ್ಪ ಕುರಿತು ಪರಿಜ್ಞಾನವಿದೆ. ಪ್ರತಿ ವಿದ್ಯಾರ್ಥಿಗಳು ಸರ್ಪಗಳನ್ನು ಹಿಡಿಯುತ್ತಾರೆ. ಪ್ರತಿಯೊಂದು ಸರ್ಪಗಳ ಗುಣ,ವಿಷಯುಕ್ತ ಸರ್ಪ,ಜೊತೆಗೆ ಯಾವ ಜಾತಿಯ ಸರ್ಪ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಹೇಳುತ್ತಾರೆ. ಇಷ್ಟೇ ಅಲ್ಲ ಸದರಿ ಶಾಲೆಯಲ್ಲಿ 70ಕ್ಕೂ ಅಧಿಕ ಪ್ರಕಾರದ ಹಾವುಗಳಿವೆ ಇಲ್ಲಿಯ ಪ್ರತಿ ವಿದ್ಯಾರ್ಥಿ ಪಠ್ಯ ಪುಸ್ತಕದ ಜೊತೆಗೆ ಸರ್ವ ಮಿತ್ರರಾಗಿ ಹೊರಹೊಮ್ಮುತ್ತಾರೆ.ಪ್ರೇಕ್ಷಕರೇ ತಮಗೆ ಸಮಯವಿದ್ದರೆ ತಪ್ಪದೇ ನೋಡಿ ಸರ್ಪಗಳ ಶಾಲೆ ಚಂದಗಡ್ ತಾಲೂಕಿನ ಡೋ ಲಗರವಾಡಿ ಗ್ರಾಮಕ್ಕೆ ಭೇಟಿ ನೀಡಿ.
ವರದಿ:ಮಹಾವೀರ ಚಿಂಚಣೆ