Ad imageAd image

ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ನಡೆದಿರುವ ಅಮಾನವೀಯ ಘಟನೆ ದುರದೃಷ್ಟಕರ: ಸಚಿವ ಶರಣಪ್ರಕಾಶ ಪಾಟೀಲ್

Bharath Vaibhav
ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ನಡೆದಿರುವ ಅಮಾನವೀಯ ಘಟನೆ ದುರದೃಷ್ಟಕರ: ಸಚಿವ ಶರಣಪ್ರಕಾಶ ಪಾಟೀಲ್
WhatsApp Group Join Now
Telegram Group Join Now

ಕಲಬುರಗಿ: ಸೇಡಂ ಶಾಸಕರು ಹಾಗೂ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಅವರು ನಗರದ ಪತ್ರಿಕಾ ಭವನದಲ್ಲಿ ದಿನಾಂಕ ೨೧/೦೨/೨೦೨೫ ರಂದು ಸುದ್ದಿಗೋಷ್ಠಿ ನಡೆಸಿ ಇದೇ ಫೆ.24 ರಿಂದ 10 ದಿನಗಳ ಕಾಲ ನಡೆಯುವ ರಾಷ್ಟ್ರೀಯ ಸ್ವರಸ್ ಮೇಳದ ಮಾಹಿತಿಯನ್ನು ಮಾಧ್ಯಮದೊಂದಿಗೆ ಹಂಚಿಕೊಂಡರು.

ಕಲ್ಯಾಣ ಕರ್ನಾಟಕದ ಮಹಿಳೆಯರ ಆರ್ಥಿಕ ಸಬಲತೆಗಾಗಿ ಹತ್ತು ದಿನಗಳ ಕಾಲ ರಾಷ್ಟ್ರೀಯ ಸ್ವರಸ್ ಮೇಳವನ್ನು ನಗರದ ಜಾತ್ರಾ ಮೈದಾನದಲ್ಲಿ ಫೆಬ್ರವರಿ 24ರಂದು ಆಯೋಜಿಸಲಾಗಿದೆ. ಕಲ್ಯಾಣ ಕರ್ನಾಟಕದ ಮಹಿಳಾ ಆರ್ಥಿಕ ಸಬಲತೆಗಾಗಿ ಮಹಾಮೇಳವಾಗಿದ್ದು, 230 ಮಹಿಳಾ ಸ್ವಸಹಾಯ ಸಂಘ ಭಾಗಿಯಾಗಲಿವೆ, 18 ರಾಜ್ಯಗಳಿಂದ ಸ್ವಸಹಾಯ ಸಂಘಗಳ ಆಗಮಿಸಲಿವೆ.

ಕರ್ನಾಟಕ ಸೇರಿದಂತೆ ರಾಷ್ಟ್ರದ 18 ರಾಜ್ಯಗಳಿಂದ ಮಹಿಳಾ ಸ್ವಸಹಾಯ ಸಂಘಗಳ 2,000 ಮಹಿಳೆಯರು ಪಾಲ್ಗೊಳ್ಳಲಿದ್ದಾರೆ. ಮಹಿಳೆಯರು ತಾವು ಉತ್ಪಾದನೆ ಮಾಡಿರುವ ಮತ್ತು ತಯಾರು ಮಾಡಿರುವ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಕಲ್ಬುರ್ಗಿಯ ಮತ್ತು ವಿಜಾಪುರದ ಖಡಕ್ ರೊಟ್ಟಿ ಸೇರಿದಂತೆ ಬೀದರದ ಬಿದರಿ ಕಲೆ, ಕೊಪ್ಪಳದ ಕಿನ್ನಾಳದ ಗೊಂಬೆಗಳು, ಆಂಧ್ರದ ತಹರೆವಾರಿ ಆಟಿಕೆಗಳು, ಸಿಕ್ಕಿಂನ ಕಸುತಿ, ತಂಜಾವುರು, ಪಂಜಾಬ್ ದಕ್ಷಿಣ ಭಾರತವು ಸೇರಿದಂತೆ 18 ರಾಜ್ಯಗಳ ಪ್ರಮುಖ ವಸ್ತುಗಳು, ಇತರೆ ಕಸೂತಿ ಕಲೆಗಳು ನಾನಾ ವಸ್ತುಗಳು ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಹೇಳಿದರು.

ರಾಷ್ಟ್ರ ಮಟ್ಟದ ಸ್ವರಸ್ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಉದ್ಘಾಟನೆ ನಡೆಸುವರು. ನಾನು ಸೇರಿದಂತೆ ರಾಜ್ಯದ ವಿವಿಧ ಖಾತೆಗಳ ಸಚಿವರು ಶಾಸಕರು ಹಾಗೂ ಸಂಸದ ರಾಧಾಕೃಷ್ಣ ದೊಡ್ಡಮನಿ ಸೇರಿದಂತೆ ಹಲವರು ಉಪಸ್ಥಿತರಿರುವರು ಎಂದು ಸಚಿವರು ತಿಳಿಸಿದರು.

ಇದೇ ಸಮಯದಲ್ಲಿ ಸೇಡಂ ತಾಲೂಕಿನ ಶ್ರೀ ಸಿಮೆಂಟ್ ಕಾರ್ಖಾನೆಯ ಅಂಗಳದಲ್ಲಿ ನಡೆದಿದೆ ಎನ್ನಲಾಗಿರುವ ಅಮಾನವೀಯ ಘಟನೆ ದುರದೃಷ್ಟಕರ ಎಂದು ಡಾ.ಶರಣ್ ಪ್ರಕಾಶ್ ಆರ್. ಪಾಟೀಲ್ ಖೇದ ವ್ಯಕ್ತಪಡಿಸಿದರು.

ಮೃತ ಕಾರ್ಮಿಕನನ್ನು ಆತನ ಜೊತೆಯಲ್ಲೇ ಕೆಲಸ ಮಾಡುವ ಇತರೆ ಕಾರ್ಮಿಕರು ಪ್ರಾಣಿಗಳಂತೆ ಹೊತ್ತೈದಿರುವ ಘಟನೆ ಅಮಾನವೀಯ. ಈ ಕುರಿತು ತನಿಖೆ ನಡೆಸಲು ಈಗಾಗಲೇ ಸೂಚನೆಯನ್ನು ನೀಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು ಆರು ಜನರನ್ನು ಪೊಲೀಸರು ಬಂಧಿಸಲಾಗಿದೆ ಎಂದರು. ಅದಲ್ಲದೆ ಸೇಡಂ ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿರುವ ರೈಲ್ವೆ ಟ್ರ್ಯಾಕ್ ನಿಂದಾಗಿ ಅಂಬುಲೆನ್ಸ್ ನಲ್ಲಿ ಚಿಕಿತ್ಸೆಗೆ ಹೋಗುತ್ತಿದ್ದ ವ್ಯಕ್ತಿ ಓರ್ವರು ಮಾರ್ಗಮದ್ಯ ಸಾವನ್ನಪ್ಪಿದ ಘಟನೆಗೆ ಹಿನ್ನೆಲೆಯಲ್ಲಿ ಕೂಡಲೇ ಶಿಫ್ಟ್ ಮಾಡುವಂತೆ ಈಗಾಗಲೇ ರೈಲ್ವೆ ಇಲಾಖೆಗೆ ತಿಳಿಸಲಾಗಿದೆ. ರೈಲ್ವೆ ಇಲಾಖೆ ಗಂಭೀರತೆಯನ್ನು ಅರಿತಿದೆ. ಅದು ಕೂಡ ಒಪ್ಪಿಗೆ ಸೂಚಿಸಿದೆ. ಆದ್ದರಿಂದ ಶೀಘ್ರವೇ ರೈಲು ಹಳಿ ಪಟ್ಟಣದ ಮಧ್ಯದಿಂದ ಹೊರವಲಯಕ್ಕೆ ಶಿಫ್ಟ್ ಆಗಲಿದೆ ಎಂದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!