ಬೆಳಗಾವಿ: ಈ ಹಿಂದೆಯೂ ಹಲವಾರು ಬಾರಿ ಕೈದಿಗಳ ನಡುವೆ ಮಾರಾಮಾರಿಯೇ ಹಿಂಡಲಗಾ ಜೈಲಿನಲ್ಲಿ ನಡೆದಿತ್ತು. ಇದು ಮತ್ತೆ ಮರುಕಳಿಸಿದೆ. ಇಂದು ಹಿಂಡಲಗಾ ಜೈಲಿನಲ್ಲಿ ಕೈದಿಗಳು ಹೊಡೆದಾಡಿಕೊಂಡಿರುವಂತ ಘಟನೆ ನಡೆದಿದೆ.
ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಗ್ರಾಮದಲ್ಲಿರುವಂತ ಸೆಂಟ್ರಲ್ ಜೈಲಿನಲ್ಲಿ ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಎಸ್ ಟಿ ಡಿ ಪೋನ್ ಕಾಲ್ ವಿಚಾರಕ್ಕೆ ಆರಂಭಗೊಂಡ ಜಗಳ ಪರಸ್ಪರ ಕೈಕೈ ಮಿಲಾಯಿಸುವಂತ ಹಂತಕ್ಕೂ ತಲುಪಿದೆ.
ಕಲ್ಲಿನಿಂದ ಜಜ್ಜಿ ಕೈದಿ ಸುರೇಶ್ ಬೆಳಗಾವಿ ಎಂಬುವರಿಗೆ ಹಲ್ಲೆ ಮಾಡಲಾಗಿದೆ. ಮಂಗಳೂರು ಮೂಲದ ಕೈದಿ ಫಯಾಸ್ ಎಂಬಾತನಿಂದ ಈ ಕೃತ್ಯ ಎಸಗಲಾಗಿದೆ.




