ಸಿಂಧನೂರು : ಜುಲೈ 1 ರಾಯಚೂರು ನಗರದ ಡಾ. ಬಿಆರ್. ಅಂಬೇಡ್ಕರ್ ವೃತ್ತದಲ್ಲಿ ಮಾದಿಗ ಸಮುದಾಯ ಪ್ರತಿಭಟಿಸಿ ಒಳ ಮೀಸಲಾತಿ ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರಕಾರ ವಿರುದ್ಧ ಸಾವಿರಾರು ಜನರು ಶುಕ್ರವಾರ ಬೃಹತ್ ಪ್ರತಿಭಟನೆ ಅರೆಬೆತ್ತಲೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಜವಾಬ್ದಾರಿ ಆಯ ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿ ಒಂದು ವರ್ಷ ಗತಿಸಿದರು ರಾಜ್ಯ ಕಾಂಗ್ರೆಸ್ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದ್ದು ಖಂಡಿಸಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಅರೆಬೆತ್ತಲೆಯಾಗಿ ರಸ್ತೆಯಲ್ಲಿ ಮಲಗಿ ವಾಹನ ಸಂಚಾರ ತಡೆದು ಜನಾಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಎಂ. ವಿರುಪಾಕ್ಷಿ. ರವೀಂದ್ರ ಜಲ್ದಾರ್. ತಿಮ್ಮಪ್ಪ ಪಿರಂಗಿ. ಜಿಬಿ. ರಾಜು. ಮಾನಪ್ಪ ಮೇಸ್ತ್ರಿ. ರಂಜಿತ್ ದಂಡೋರ. ದುಳ್ಳಯ್ಯ. ಚಿಕ್ಕೋರೆಪ್ಪ ತುರುವಿಹಾಳ. ಮಲ್ಲಿಕಾರ್ಜುನ್ ಹತ್ತಿಗುಡ್ಡ. ಇನ್ನು ಅನೇಕರಿದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ.




