ಬೆಂಗಳೂರು : ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ಇಂದಿನಿಂದ ಆರಂಭವಾಗಲಿದೆ. ಈ ಬಗ್ಗೆ ಡಿಸಿಎಂ ಡಿಕೆಶಿ ಪ್ರತಿಕ್ರಿಯೆ ಕೊಟ್ಟಿದ್ದು, ಎಲ್ಲಾ ಸಮುದಾಯದ ಜನರು ಮುಖ್ಯವಾಹಿನಿಗೆ ಬರೋಕೆ ಇದು ಸಹಕಾರಿಯಾಗಲಿದೆ ಎಂದಿದ್ದಾರೆ.
ಬೆಂಗಳೂರಲ್ಲಿ ಮಾತಾಡಿದ ಅವರು ನ್ಯಾಯಮೂರ್ತಿ ಡಾ. ಹೆಚ್. ಎನ್. ನಾಗಮೋಹನ ದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗದ ನಿರ್ದೇಶನದಂತೆ ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಜನರು ಹಿಂಜರಿಯದೆ ತಮ್ಮ ಕುಟುಂಬದ ಜಾತಿ, ಉಪಜಾತಿ ಮತ್ತು ಇತರೆ ಮಾಹಿತಿಗಳನ್ನು ನಿಖರವಾಗಿ ಗಣತಿದಾರರಿಗೆ ನೀಡಬೇಕು ಎಂದು ಹೇಳಿದರು.
ಈ ಸಂಬಂಧ ಯಾವ ಗೊಂದಲ ಇಲ್ಲ. ನಗರಪ್ರದೇಶದಲ್ಲಿ ಕೆಲವರು ಜಾತಿ ಬರೆಸಲು ಹಿಂದೇಟು ಹಾಕುತ್ತಾರೆ. ಹಳ್ಳಿಗಳಲ್ಲಿ ಆ ಕಷ್ಟ ಇಲ್ಲ. ಎಲ್ಲರೂ ಪಾರದರ್ಶಕವಾಗಿರುತ್ತಾರೆ. ಎಲ್ಲರಿಗೂ ಅವಕಾಶ ಸಿಗಬೇಕು ಎಂಬ ಕಾರಣಕ್ಕೆ ಸಮೀಕ್ಷೆ ನಡೆಸಲು ಸರ್ಕಾರ ತೀರ್ಮಾನ ಮಾಡಿರೋದಾಗಿ ಡಿಕೆಶಿ ತಿಳಿಸಿದರು.




