Ad imageAd image

ಒಳ ಮೀಸಲಾತಿಯನ್ನು ಶೇ. 7 ರಷ್ಟು ಹೆಚ್ಚಿಸಲು ಒತ್ತಾಯ

Bharath Vaibhav
ಒಳ ಮೀಸಲಾತಿಯನ್ನು ಶೇ. 7 ರಷ್ಟು ಹೆಚ್ಚಿಸಲು ಒತ್ತಾಯ
WhatsApp Group Join Now
Telegram Group Join Now

ರಾಮದುರ್ಗ : ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಬೆಂಗಳೂರು ಇವರಿಗೆ ತಾಲೂಕಿನ ತಹಶೀಲ್ದಾರ ಸಾಹೇಬರು ರಾಮದುರ್ಗ ರವರ ಮುಖಾಂತರ ಮನವಿ ಸಲ್ಲಿಸಲಾಯಿತು.

ಒಳಮೀಸಲಾತಿ ಹಂಚಿಕೆಯಲ್ಲಿ 63 ಸಮುದಾಯಗಳಿಗೆ ನ್ಯಾಯ ಒದಗಿಸಿ, ಮೀಸಲಾತಿ ಪ್ರಮಾಣವನ್ನು ಶೇಕಡಾ 7% ರಷ್ಟು ಹೆಚ್ಚಿಸುವ ಕುರಿತು ಮನವಿ

ಹೌದು ವೀಕ್ಷಕರೇ ಇಂದು ರಾಮದುರ್ಗ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು

ಭಾರತದಲ್ಲಿ ಸಹಸ್ರಾರು ವರ್ಷಗಳಿಂದ ಜಾರಿಯಲ್ಲಿರುವ ವರ್ಣವ್ಯವಸ್ಥೆ, ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಯಿಂದಾಗಿ ನೂರಾರು ಜಾತಿಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುತ್ತಾರೆ.

ಸ್ವಾತಂತ್ರ್ಯಾ ನಂತರ ಶೋಷಿತ ವರ್ಗಗಳಿಗೆ ನ್ಯಾಯ ಒದಗಿಸಿ ಪರಿಶಿಷ್ಟ ಜಾತಿ & ಪ.ಪಂಗಡಗಳೆಂದು ಸಂವಿಧಾನಾತ್ಮಕವಾಗಿ ಹಲವು ಸೌಲಭ್ಯಗಳನ್ನು ಪಡೆಯಲು ಡಾ. ಬಾಬಾಸಾಹೇಬ ಅಂಬೇಡ್ಕರವರು ಅನುಕೂಲ ಕಲ್ಪಿಸಿರುತ್ತಾರೆ.

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಅಡಿಯಲ್ಲಿ ವಿವಿಧ ಸಮುದಾಯಗಳಿಗೆ ನ್ಯಾಯ ಒದಗಿಸುವ ಬಹುದಿನದ ಕೂಗಿನ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಳಮೀಸಲಾತಿಯನ್ನು ಕಲ್ಪಿಸಲು ನಿವೃತ್ತ ನ್ಯಾಯಮೂರ್ತಿಗಳಾದ ಮಾನ್ಯ ಶ್ರೀ ಎಚ್. ಎನ್.ನಾಗಮೋಹನದಾಸರವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ಮಾನ್ಯ ಶ್ರೀ ಸಿದ್ದರಾಮಯ್ಯ ನವರ ನೇತೃತ್ವದ ಸರಕಾರ ರಚಿಸಿತ್ತು. ಈ ಆಯೋಗದ ನಿರ್ದೇಶನದ ಮೇರೆಗೆ ಸರಕಾರವು ಸಮೀಕ್ಷೆಯನ್ನು ಕೈಗೊಂಡಿತ್ತು. ಆದರೆ ಈ ಸಮೀಕ್ಷೆಯನ್ನು ಸರಕಾರ ತರಾತುರಿಯಲ್ಲಿ ಮಾಡಿದ್ದು, ಸಾವಿರಾರು ಕುಟುಂಬಗಳು ಹೊಟ್ಟೆಪಾಡಿಗಾಗಿ ಗೂಳೆ ಹೋದವರನ್ನು ಸಮೀಕ್ಷೆ ಮಾಡಿರುವದಿಲ್ಲ. ಯಾವುದೇ ಕುಲ ಗೋತ್ರ ಶಾಸ್ತ್ರ ಅಧ್ಯಯನ ಮಾಡಿಲ್ಲಾ. ಪ್ರಸ್ತುತ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ವಸ್ತುಸ್ಥಿತಿ ಅಧ್ಯಯನ ಮಾಡಿಲ್ಲಾ. ತಪ್ಪು ದತ್ತಾಂಶದ ಆಧಾರದ ಮೇಲೆ ಆಯೋಗವು ಪರಿಶಿಷ್ಟ ಜಾತಿಗಳನ್ನು 5 ಗುಂಪು(ಎ.ಬಿ.ಸಿ.ಡಿ.ಇ) ಗಳೆಂದು ವರ್ಗೀಕರಿಸಿ ದಿ. 04-08-2025 ರಂದು ಸರಕಾರಕ್ಕೆ ವರದಿ ಸಲ್ಲಿಸಿದೆ.

ಈ ಹಿಂದೆ ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ಅವರ ನೇತೃತ್ವದ ಸರಕಾರವು ಮೀಸಲಾತಿಯನ್ನು ಶೇಕಡಾ 15 ರಿಂದ ಶೇಕಡಾ 17 ಕ್ಕೆ ಹೆಚ್ಚಿಸಿ ಬಂಜಾರ, ಬೋವಿ ವಡ್ಡರ, ಕೊರಮ, ಕೊರಚ ಸಮುದಾಯಗಳಿಗೆ (4 ಸಮುದಾಯಗಳಿಗೆ) ಶೇಕಡಾ 4.5 ರಷ್ಟು ಮೀಸಲಾತಿಯನ್ನು ನೀಡಲು ಘೋಷಿಸಿದ್ದರು. ಅಲ್ಲದೆ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇಕಡಾ 1 ರಷ್ಟು ಮೀಸಲಾತಿ

ಹಿಂದುಳಿದ ಸಮುದಾಯಗಳ ನಾಯಕರೆನಿಸಿಕೊಂಡಿರುವ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಮಾತನಾಡುವ ತಾವು ಹಿಂದಿನ ಸರಕಾರದ ಮೀಸಲಾತಿ ಪ್ರಮಾಣವನ್ನು ಪರಿಗಣಿಸದೇ, ಆಯೋಗ ವರದಿ ನೀಡಿದ 5 ಗುಂಪುಗಳನ್ನೂ ಪರಿಗಣಿಸದೇ ಸಮಾಜದ ಮುಖಂಡರು, ಚಿಂತರಕರ ಜೊತೆಗೆ ಚರ್ಚಿಸದೇ

ಅದಿವೇಶನದಲ್ಲಿಯೂ ಚರ್ಚಿಸದೇ ತರಾತುರಿಯಲ್ಲಿ ಕೆಲ ಪಟ್ಟಬದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಮೀಸಲಾತಿಯನ್ನು ಕೇವಲ 3 ಗುಂಪುಗಳಾಗಿ ರಚಿಸಿ (ಎ.ಬಿ.ಸಿ) 35 ಜಾತಿಗಳಿಗೆ (ಎಡ ಬಲ) 12% ರಷ್ಟು ಮೀಸಲಾತಿ ನೀಡಿ ಬಹುಸಂಖ್ಯಾತರಿರುವ ಬಂಜಾರಾ, ಭೋವಿ ವಡ್ಡರ, ಕೊರಮ, ಕೊರಚ ಸೇರಿದಂತೆ ಇತರೆ ಅಲೆಮಾರಿ ಸಮುದಾಯ ಸೇರಿ 63 ಜಾತಿಗಳಿಗೆ ಕೇವಲ 5% ರಷ್ಟು ಮೀಸಲಾತಿ ನೀಡಿ ಗೊಂದಲ ಸೃಷ್ಟಿಸಿದ್ದೀರಿ. ಅಲ್ಲದೆ ಪರಿಶಿಷ್ಟ ಜಾತಿಯಲ್ಲಿಯೇ ದೃಶ್ಯ & ಅಸ್ಪೃಶ್ಯರೆಂದು ವಿಭಾಗಿಸಿ ಕೆಳ ಸಮುದಾಯಗಳಲ್ಲಿ ಒಡಕು ಮೂಡಿಸುವ ಕೆಲಸ ಮಾಡಿರುತ್ತೀರಿ.

ಕಾರಣ ಶೋಷಿತ ವರ್ಗಗಳಾಗಿರುವಂತಹ ಬಂಜಾರಾ, ಭೋವಿ ವಡ್ಡರ, ಕೊರಮ, ಕೊರಚ ಸಮುದಾಯಗಳಿಗೆ ಶೇಕಡಾ 7% ರಷ್ಟು ಮೀಸಲಾತಿ ಹೆಚ್ಚಿಸಿ ಇತರೆ 59 ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿಯನ್ನು ಕೊಡಲು ಅಗ್ರಹಿಸುತ್ತೇವೆ.

ಮಾನ್ಯ ಸುಪ್ರಿಂ ಕೋರ್ಟಿನ ಆದೇಶದಂತೆ ಸೂಕ್ತ ಮಾನದಂಡಗಳೊಂದಿಗೆ ಈ ಸಮುದಾಯಗಳ ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ನಿಖರ ಮತ್ತು ಸ್ಪಷ್ಟ ಮತ್ತು ವೈಜ್ಞಾನಿಕ ದತ್ತಾಂಶಗಳನ್ನು ಸಂಗ್ರಹಿಸಿ ತಾವು ಮಾಡಿರುವ ತಾರತಮ್ಯವನ್ನು ಮತ್ತೊಮ್ಮೆ ಪುನರ್ ಪರಿಶೀಲಿಸಿ ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡಲು ತಮ್ಮಲ್ಲಿ ವಿನಮ್ರಮವಾಗಿ ಮತ್ತು ಆಗ್ರಹಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ.

ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆ, ರಾಜ್ಯ ಹಂತದಲ್ಲಿ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು. ಅದಕ್ಕೆ ತಾವು ಅವಕಾಶ ಕಲ್ಪಿಸದೇ ನ್ಯಾಯ ಒದಗಿಸಲು ವಿನಂತಿಸಿಕೊಳ್ಳುತ್ತೇವೆ ಎಂದು ಮನವಿ ಸಲ್ಲಿಸಿದರು.

ವರದಿ :  ಮಂಜುನಾಥ ಕಲಾದಗಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!